ಚಿತ್ರದುರ್ಗ: ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿರುವ ಹಾಗೂ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಅಚಾತುರ್ಯವೊಂದು ನಡೆದಿದ್ದು, ಕರ್ನಾಟಕ(karnataka) ಮೂಲದ ನಾಲ್ವರು ಸಾವನ್ನಪ್ಪಿದ್ದರು.(death) ಈಗ ಮತ್ತೋರ್ವ ನಾಗಸಾಧು ಬಲಿಯಾಗಿದ್ದಾರೆ.
144 ವರ್ಷಕ್ಕೊಮ್ಮೆ ಅತಿ ಅಪರೂಪದ ಮಹಾಕುಂಭಮೇಳವು (Maha Kumbh Mela) ಸದ್ಯ ಜನಮನ ಸೆಳೆದಿದೆ. ಈ ವೇಳೆ ದುರದೃಷ್ಟವಶಾತ್ ಕಾಲ್ತುಳಿತ ಸಂಭವಿಸಿದ್ದು, 30 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ರಾಜ್ಯದ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಈಗ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಸಾಧು ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಲ್ತುಳಿತದಿಂದ ರಾಜನಾಥ್ ಮಹಾರಾಜ್(49)(Rajnath Maharaj) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತ ನಾಗಸಾಧು ರಾಜನಾಥ್ ಅವರು ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀ ಒಡನಾಡಿಯಾಗಿದ್ದರು ಎನ್ನಲಾಗಿದೆ. 7 ವರ್ಷಗಳಿಂದ ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ನೆಲೆಸಿದ್ದರು. ಕಳೆದ 15 ದಿನಗಳ ಹಿಂದೆ ಕುಂಭ ಮೇಳಕ್ಕೆ ತೆರಳಿದ್ದರು ಎನ್ನಲಾಗಿದೆ.