ಇಡೀ ವಿಶ್ವವೇ ಕಾಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಗೆ ಜುಲೈ 26ರಂದು ಅಧಿಕೃತ ಚಾಲನೆ ಸಿಗಲಿದೆ. ಆದರೆ, ಕೆಲವು ಪಂದ್ಯಗಳು ಇಂದಿನಿಂದಲೇ ಆರಂಭವಾಗಲಿವೆ. ಹೀಗಾಗಿ ಫುಟ್ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಗೆ ಇಂದಿನಿಂದ ಚಾಲನೆ ಸಿಗುತ್ತಿದೆ.
ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ಮೊದಲ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. 1992 ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್ ನಲ್ಲಿ ದಲ ಬಾರಿಗೆ ಉದ್ಘಾಟನೆಗೂ ಮುನ್ನ ಕೆಲ ಪಂದ್ಯಗಳನ್ನು ನಡೆಸಲಾಗಿತ್ತು. ಇದಾದ ನಂತರ ಪ್ರತಿ ಒಲಿಂಪಿಕ್ಸ್ ನಲ್ಲಿಯೂ ಈ ಸಂಪ್ರದಾಯ ಮುಂದುವರೆಯಿತು.
ಫುಟ್ಬಾಲ್, ರಗ್ಬಿ, ಬಾಸ್ಕೆಟ್ ಬಾಲ್ ನಂತಹ ಕ್ರೀಡಾಪಟುಗಳಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುತ್ತದೆ. ಹೀಗಾಗಿ ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ 48 ಗಂಟೆಗಳ ವಿಶ್ರಾಂತಿ ನೀಡುವ ಸಲುವಾಗಿ ಉದ್ಘಾಟನೆಗೂ ಮುನ್ನ ಕೆಲವು ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
ಮೈದಾನದ ಬಳಕೆ ಕೂಡ ಇದಕ್ಕೆ ಕಾರಣವಾಗಿದ್ದು, ಫುಟ್ಬಾಲ್, ರಗ್ಬಿ ಸೇರಿದಂತೆ ಕೆಲ ಪಂದ್ಯಗಳು ದೀರ್ಘಾವಧಿಯಲ್ಲಿ ನಡೆಯುತ್ತವೆ. ಮೊದಲ ಸುತ್ತು, ದ್ವಿತೀಯ ಸುತ್ತು, ಸೆಮಿಫೈನಲ್, ಫೈನಲ್ ಈ ರೀತಿಯಾಗಿ ಸಾಗುತ್ತವೆ. ಅದರಲ್ಲಿಯೂ ಮಹಿಳಾ ಹಾಗೂ ಪುರುಷ ತಂಡಗಳು ಭಾಗವಹಿಸುತ್ತಿರುತ್ತವೆ. ಹೀಗಾಗಿ ಸತತವಾಗಿ ಪಂದ್ಯಗಳನ್ನು ಆಯೋಜಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಒಲಿಂಪಿಕ್ಸ್ ಸೇರಿದಂತೆ ಇನ್ನಿತರ ಪಂದ್ಯಗಳು ಆರಂಭವಾಗುವ ಮುನ್ನವೇ ಫುಟ್ಬಾಲ್ ಸೇರಿದಂತೆ ಕೆಲವು ಪಂದ್ಯಗಳನ್ನು ಆಯೋಜಿಸಲಾಗಿರುತ್ತದೆ. ಒಂದೇ ದಿನದಲ್ಲಿ ಪದಕ ಬೇಟೆ ನಡೆಯುವುದಿಲ್ಲ. ಬದಲಾಗಿ ಇಲ್ಲಿ ಗ್ರುಪ್ ಹಂತದ ಪಂದ್ಯಗಳು ನಡೆಯುತ್ತವೆ.
ಜುಲೈ 24ರ ವೇಳಾಪಟ್ಟಿ:
• 6:30 PM- ಫುಟ್ಬಾಲ್ – ಅರ್ಜೆಂಟೀನಾ vs ಮೊರಾಕೊ
• 6:30 PM – ಫುಟ್ಬಾಲ್ – ಉಜ್ಬೇಕಿಸ್ತಾನ್ vs ಸ್ಪೇನ್
• 7:00 PM – ರಗ್ಬಿ ಸೆವೆನ್ಸ್ – ಆಸ್ಟ್ರೇಲಿಯಾ ವಿರುದ್ಧ ಸಮೋವಾ
• 7:30 PM- ರಗ್ಬಿ ಸೆವೆನ್ಸ್ – ಅರ್ಜೆಂಟೀನಾ vs ಕೀನ್ಯಾ
• 8:00 PM – ರಗ್ಬಿ ಸೆವೆನ್ಸ್ – ಫ್ರಾನ್ಸ್ vs ಯುನೈಟೆಡ್ ಸ್ಟೇಟ್ಸ್
• 8:30 PM – ಫುಟ್ಬಾಲ್ – ಗಿನಿ ವಿರುದ್ಧ ನ್ಯೂಝಿಲೆಂಡ್
• 8:30 PM – ಫುಟ್ಬಾಲ್ – ಈಜಿಪ್ಟ್ vs ಡೊಮಿನಿಕನ್ ರಿಪಬ್ಲಿಕ್
• 8:30 PM – ರಗ್ಬಿ ಸೆವೆನ್ಸ್ – ಫಿಜಿ vs ಉರುಗ್ವೆ
• 9:00 PM – ರಗ್ಬಿ ಸೆವೆನ್ಸ್ – ಐರ್ಲೆಂಡ್ vs ಸೌತ್ ಆಫ್ರಿಕಾ
• 9:30 PM – ರಗ್ಬಿ ಸೆವೆನ್ಸ್ – ನ್ಯೂಝಿಲೆಂಡ್ vs ಜಪಾನ್
• 10:30 PM – ಫುಟ್ಬಾಲ್ – ಇರಾಕ್ vs ಉಕ್ರೇನ್
• 10:30 PM – ಫುಟ್ಬಾಲ್ – ಜಪಾನ್ vs ಪರಾಗ್ವೆ
• 10:30 PM – ರಗ್ಬಿ ಸೆವೆನ್ಸ್ – ಆಸ್ಟ್ರೇಲಿಯಾ vs ಕೀನ್ಯಾ
• 11:00 PM – ರಗ್ಬಿ ಸೆವೆನ್ಸ್ – ಅರ್ಜೆಂಟೀನಾ vs ಸಮೋವಾ
• 11:30 PM – ರಗ್ಬಿ ಸೆವೆನ್ಸ್ – ಫ್ರಾನ್ಸ್ vs ಉರುಗ್ವೆ
• 12:00 AM – ರಗ್ಬಿ ಸೆವೆನ್ಸ್ – ಫಿಜಿ vs ಯುನೈಟೆಡ್ ಸ್ಟೇಟ್ಸ್
• 12:30 AM – ಫುಟ್ಬಾಲ್ – ಫ್ರಾನ್ಸ್ vs ಯುನೈಟೆಡ್ ಸ್ಟೇಟ್ಸ್
• 12:30 AM – ಫುಟ್ಬಾಲ್ – ಮಾಲಿ vs ಇಸ್ರೇಲ್
• 12:30 AM – ರಗ್ಬಿ ಸೆವೆನ್ಸ್ – ಐರ್ಲೆಂಡ್ vs ಜಪಾನ್
• 01:00 AM – ರಗ್ಬಿ ಸೆವೆನ್ಸ್ – ನ್ಯೂಝಿಲೆಂಡ್ vs ಸೌತ್ ಆಫ್ರಿಕಾ