ಮುಂಬೈ: ನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 9 ಗಂಭೀರವಾಗಿರುವ ಘಟನೆ ನಡೆದಿದೆ.
ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಬಾಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಂದ್ರಾ ಟರ್ಮಿನಸ್ ನ ಒಂದನೇ ಪ್ಲಾಟ್ ಫಾರ್ಮ್ ನಲ್ಲಿ ಈ ಘಟನೆ ನಡೆದಿದೆ. ಗೋರಖಪುರ್ ಎಕ್ಸ್ ಪ್ರೆಸ್ ರೈಲಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಾಯುತ್ತಿದ್ದರು.
ಪಾವಳಿ ಇದ್ದ ಕಾರಣ ಜನರು ತಮ್ಮ ಊರುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಲು ಆಗಮಿಸಿದ್ದರು. ಹೀಗಾಗಿ ರೈಲು ಹತ್ತುವುದಕ್ಕಾಗಿ ನೂಕುನುಗ್ಗುಲು ಉಂಟಾಗಿದೆ. ಗಾಯಗೊಂಡ 9 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳನ್ನು ಶಬೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ್ ಸುಖದರ್ ಗುಪ್ತಾ (28), ರವೀಂದ್ರ ಹರಿಹರ್ ಚುಮಾ (30), ರಾಮಸೇವಕ್ ರವೀಂದ್ರ ಪ್ರಸಾದ್ ಪ್ರಜಾಪತಿ (29), ಸಂಜಯ್ ತಿಲಕ್ರಾಮ್ ಕಂಗಯ್ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮೊಹಮ್ಮದ್ ಶರೀಫ್ ಶೇಖ್ (25), ಇಂದ್ರಜಿತ್ ಸಹಾನಿ (19), ಮತ್ತು ನೂರ್ ಮೊಹಮ್ಮದ್ ಶೇಖರ್ (18) ಗಾಯಾಳುಗಳು ಎಂದು ಗುರುತಿಸಲಾಗಿದೆ.
ಪ್ಲಾಟ್ ಫಾರ್ಮ್ ನಲ್ಲಿ ರಕ್ತದ ಕಲೆಗಳು ಕೂಡ ಬಿದ್ದಿವೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.