ಬೈಂದೂರು: ಬೈಂದೂರು ಉತ್ಸವ ಸಮಿತಿ ಇವರ ವತಿಯಿಂದ ಹಾಗೂ ಶಾಸಕ ಗುರುರಾಜ್ ಗಂಟಿಹೊಳೆ ಅವರ ಪರಿಕಲ್ಪನೆಯಲ್ಲಿ ಜನವರಿ 24, 25 ಹಾಗೂ 26ರಂದು ನಗರದ ಗಾಂಧಿ ಮೈದಾನದಲ್ಲಿ ಅದ್ಧೂರಿಯಾಗಿ ಎರಡನೇ ವರ್ಷದ ‘ಬೈಂದೂರು ಉತ್ಸವ-2026’ ಕಾರ್ಯಕ್ರಮವು ನಡೆಯಲಿದೆ.

ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾರ್ಗದರ್ಶನದ ಮೇರೆಗೆ ಮೂರು ದಿನಗಳ ಕಾಲ ನಡೆಯುವ ಬೈಂದೂರು ಉತ್ಸವದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಲಿ, ಎಂ.ಆರ್.ಜಿ.ಗ್ರೂಪ್ ಚೇರ್ಮನ್ ಕೆ. ಪ್ರಕಾಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ಕೃಷ್ಣಮೂರ್ತಿ ಮಂಜರು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉತ್ಸವ ಸಮಿತಿಯ ಎಚ್.ಎಸ್.ಶೆಟ್ಟಿ, ಟಿ.ಶಿವಾನಂದ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮುಂಬೈ ಅರ್ಜುನ್ ಹಾಸ್ಪಿಟಾಲಿಟಿಯ ಅಶೋಕ್ ಶೆಟ್ಟಿ ಬೆಳ್ಳಾಡಿ, ಚಿತ್ರರಂಗದ ರಿಷಬ್ ಶೆಟ್ಟಿ, ಶನೀಲ್ ಗೌತಮ್, ರಾಜ್ ಬಿ.ಶೆಟ್ಟಿ ಬಿಗ್‌ಬಾಸ್ ಸೀಸನ್-11 ವಿಜೇತ ಹನುಮಂತ ಅವರು ಭಾಗವಹಿಸಲಿದ್ದಾರೆ.

ಉತ್ಸವದಲ್ಲಿ ಕಾರ್ಯಕ್ರಮ ವೈವಿಧ್ಯ
ವಿಶೇಷ ಆಕರ್ಷಣೆಯಾಗಿ ಕಳರಿ ಬೆಂಕಿಯಾಟ, ವಿವಿಧ ಗೋಷ್ಠಿಗಳು, ಪುಸ್ತಕ ಸಂತೆ, ಕಾರ್ಟೂನ್ ಹಬ್ಬ, ಚೆಂಡೆ ಡೋಲು ವಾದನ, ಕೀಲುಕುದುರೆ, ಹೋಳಿ ಕುಣಿತ, ಭಜನೆ ಟ್ಯಾಲೆಂಟ್, ಬೈಂದೂರು ಹುಲಿ ಹೆಜ್ಜೆ, ಅಮ್ಯೂಸ್‌ಮೆಂಟ್ ಪಾರ್ಕ್ ವಾರ್‌ಷಿಪ್ ಇಲ್ಯಾಣಿ, ಬೈಂದೂರು ಬಾಯಿ ಪಟಾಕಿ, ಹೆಬ್ಬಾಗಿಲು ಮನೆ, ಬೈಂದೂರಿನ ದೇಗುಲಗಳ ಪ್ರತಿರೂಪ ಭಜನಾ ಕುಣಿತ, ಕರುಗಳ ಪ್ರದರ್ಶನ, ಜಾನುವಾರು ಪ್ರದರ್ಶನ, ಕಂಬಳಗಳು ಇರಲಿವೆ.

ಇನ್ನೂ, ಸಾಂಸ್ಕೃತಿಕ ಆಕರ್ಷಣೆಯಾಗಿ ನೃತ್ಯ, ನಾಟಕ, ಭಕ್ತಿ ಸಂಭ್ರಮ, ಸ್ವರ ಸಂಜೆ, ಹಳೆಯ ಹಾಡುಗಳು, ಜಾದೂ ಲೋಕ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ, ಗಾನ ನಾಟ್ಯ ವೈಭವ, ನಗೆ ಹಬ್ಬ, ಟೀಮ್ ಸವಾರಿಯ ಲೈವ್ ದಿ ಬ್ಯಾಂಡ್ ರಿಯಾಲಿಟಿ ಶೋ ಕಲಾವಿದರಿಂದ ಲೈವ್ ಸಂಗೀತ ಹಬ್ಬ ಇರಲಿವೆ.

ಕೃಷಿ ಮೇಳ, ಮೀನುಗಾರಿಕಾ ಮೇಳ, ಸಂಜೀವಿನಿ ಮೇಳ, ಅರಣ್ಯ ಜಾಂಬೂರಿ, ಆರೋಗ್ಯ ಮೇಳ, ಸಾಹಿತ್ಯ ಮೇಳ, ತೋಟಗಾರಿಕಾ ಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಕೈಗಾರಿಕಾ ಮೇಳ, ಪ್ರಾಚ್ಯವಸ್ತು ಮೇಳ, ಕರಕುಶಲ ಮೇಳ, ಶಸ್ತ್ರ ಮತ್ತು ಶಾಸ್ತ್ರ ಮೇಳ, ಬೀಚ್ ಉತ್ಸವ, ಉದ್ಯೋಗ ಮೇಳ, ಸ್ಕೂಬಾ ಡೈವಿಂಗ್, ಚಿತ್ರಕಲಾ ಪ್ರದರ್ಶನ, ಗಾಳಿಪಟ ಉತ್ಸವಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾಗಿರಿ, ಇದೊಂದು ಕರಾಳ ದಿನ | ಕೈ ನಾಯಕರ ವಿರುದ್ಧ ಆರ್.ಅಶೋಕ್ ವಾಗ್ದಾಳಿ



















