ಬೆಂಗಳೂರು: ಲೋನ್ ರಿಕವರಿಗೆಂದು ಹೋಗಿದ್ದ ಬ್ಯಾಂಕ್ ಸಿಬ್ಬಂದಿ ಮೇಲೆ ಅವಾಜ್ ಹಾಕಿ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಂದನ್ ಎಂಬಾತನ ಮೇಲೆ ರಕ್ತ ಬರುವ ಹಾಗೆ ಹಲ್ಲೆ ನಡೆಸಿದ್ದಾರೆ. ರಮೇಶ್ ಹಲ್ಲೆ ನಡೆಸಿರುವ ಆಸಾಮಿ ಎನ್ನಲಾಗಿದೆ. ರಮೇಶ್ ಎರಡು ತಿಂಗಳಿನಿಂದ ಬೈಕ್ ಲೋನ್ ಕಟ್ಟಿರಲಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಚಂದನ್ ಕರೆ ಮಾಡಿ ಲೋನ್ ಅಮೌಂಟ್ ಕಟ್ಟುವಂತೆ ಹೇಳಿದ್ದಾರೆ. ಆಗ ರಮೇಶ್ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಲೋನ್ ಹಣ ಕೊಡುತ್ತೇನೆ ಅಂತಾ ಕರೆಯಿಸಿದ್ದಾನೆ.
ಸ್ಥಳಕ್ಕೆ ಹೋಗಿದ್ದ ಬ್ಯಾಂಕ್ ಸಿಬ್ಬಂದಿ ಚಂದನ್ ಗೆ ಅವಾಚ್ಯ ಪದಗಳಿಂದ ನಿಂದಿಸಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದ ಚಂದನ್ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.