ಬೆಂಗಳೂರು: ಹೊಯ್ಸಳ ರೌಂಡ್ಸ್ ನಲ್ಲಿದ್ದ ಮಡಿವಾಳ ಠಾಣೆ ಎಎಸ್ ಐ ಸಾರ್ವಜನಿಕವಾಗಿ ಕೈಯಲ್ಲಿ ಪಿಸ್ತೂಲ್ ಹಿಡಿದು ಓಡಾಡಿದ್ದಾರೆಂಬ ಆರೋಪವೊಂದು ಕೇಳಿ ಬಂದಿದೆ.
ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಮಡಿವಾಳದ ಹೋಟೆಲ್ ವೊಂದರಲ್ಲಿ ಎಎಸ್ ಐ ಓಡಾಟ ಮಾಡಿದ್ದು, ಹೋಟೆಲ್ ಸಿಬ್ಬಂದಿ ಮತ್ತು ಎಎಸ್ ಐ ಕುಮಾರ್ ಮದ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಎಎಸ್ ಐ ಪಿಸ್ತೂಲ್ ಹಿಡಿದು ಓಡಾಡುವುದನ್ನು ನೋಡಿ ಸಿಬ್ಬಂದಿ ಭಯಭೀತರಾಗಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಲೀಸ್ ಪ್ರೋಟೋಕಾಲ್ ಪ್ರಕಾರ ಪಿಸ್ತೂಲ್ ಹಿಡಿದು ಓಡಾಡುವಂತಿಲ್ಲ. ಹೀಗಾಗಿ ಈ ಸಂಬಂಧ ಇಲಾಖೆ ಆಂತರಿಕ ತನಿಖೆಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾಗೆ ಕಮೀಷನರ್ ಸೂಚನೆ ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಮಡಿವಾಳ ಎಸಿಪಿ ವಾಸುದೇವ್ ತನಿಖೆ ಮುಂದುವರೆಸಿದ್ದಾರೆ.