ಬೆಳಗಾವಿ : ಖಾನಾಪುರ ತಾಲ್ಲೂಕಿನ ಕೇರವಾಡ ಗುಂಡೆನಟ್ಟಿ ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಸಿಬ್ಬಂದಿಯ ವರ್ತನೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆರೋಪಗಳ ಪ್ರಕಾರ, ಏಜೆನ್ಸಿ ಸಿಬ್ಬಂದಿ ಪೌರಕರ್ತನಂತೆ ಕುಡಿದು ಮಲಗಿರುವುದು ಸ್ಥಳೀಯರು ವಿಡಿಯೋ ಮಾಡಿದ್ದಾರೆ.
ಚಂದ್ರಶೇಖರ ತಳವಾರ ಕಂಟ ಪೂರ್ತಿ ಕುಡಿದಿರುವ ಸಿಬ್ಬಂದಿ. ಸಾರ್ವಜನಿಕರು ತಮ್ಮ ಗ್ಯಾಸ್ ಪಾಸ್ಬುಕ್ ಪರಿಶೀಲಿಸಲು ಹೋದಾಗ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದರೂ ಸ್ಪರ್ಷ ಜ್ಙಾನವಿಲ್ಲದವನಂತೆ ಮಲಗಿದ್ದಾನೆ ಎನ್ನಲಾಗಿದೆ.
ಸ್ಥಳೀಯರು ಹೇಳುವಂತೆ, ಕಳೆದ ಮೂರ್ನಾಲ್ಕು ದಿನಗಳಿಂದ ಗ್ಯಾಸ್ ಲಭ್ಯವಿಲ್ಲದ ಕಾರಣ ಜನರನ್ನು ವಾಪಸ್ ಕಳುಹಿಸುತ್ತಿದ್ದನು ಮತ್ತು ಪ್ರಶ್ನಿಸಿದಾಗ ಉಡಾಫೆ ಉತ್ತರ ನೀಡುತ್ತಿದ್ದಾನೆ ಎಂದಿದ್ದಾರೆ.
ಇದನ್ನೂ ಓದಿ : ಹೆಲ್ಮೆಟ್ ಹಾಕಿಕೊಂಡು ಬಂದು ಸಿಲಿಂಡರ್ ಎಗರಿಸಿದ ಕಳ್ಳ


















