ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಮದುವೆಗೆ ನಿರಾಕರಿಸಿದ ಕಾರಣಕ್ಕಾಗಿ ಯುವಕನೋರ್ವನಿಂದ ಚೂರಿ ಇರಿತಕ್ಕೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಇರಿತ ನಡೆಸಿದ ಆರೋಪಿಯ ಶವ ಯುವತಿ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿ ಕೊಕ್ಕರ್ಣೆ ಚೆಗ್ರಿಬೆಟ್ಟು ನಿವಾಸಿ ರಕ್ಷಿತಾ ಎಂಬಾಕೆಯಾಗಿದ್ದು, ಆಕೆಯ ನೆರೆ ಮನೆಯ ಯುವಕ ಕಾರ್ತಿಕ್ ಪೂಜಾರಿ ಎಂಬಾತ ಚೂರಿ ಇರಿತ ನಡೆಸಿ ಪರಾರಿಯಾಗಿದ್ದ.
ನಿನ್ನೆ ಸಂಜೆ ವೇಳೆಗೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.