ಬಾಗಲಕೋಟೆ: ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, SSLC ಪರೀಕ್ಷೆಯಲ್ಲಿ ಬೀಳಗಿ ತಾಲೂಕಿನ ಶಫಾ ಶಾರಿಕ್ ನಿಂಬಾಳ್ಕರ್ ಎಂಬ ವಿದ್ಯಾರ್ಥಿನಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾರೆ.
ಶಫಾ, ಬೀಳಗಿ ಕ್ರಾಸ್ ನ ಕೊಪ್ಪ ಎಸ್.ಆರ್. ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು. ಕನ್ನಡ ಭಾಷೆಯಲ್ಲಿ ಮಾತ್ರ 125ಕ್ಕೆ 124 ಅಂಕ ಪಡೆದಿದ್ದು, ಇನ್ನುಳಿದ ಐದು ವಿಷಯಗಳಿಗೆ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಶಫಾ ಮನೆಯಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ಶಫಾ ಮನೆಗೆ ಭೇಟಿ ಆದರ್ಶ ವಿದ್ಯಾಲಯದ ಪ್ರಚಾರ್ಯ ಬಿ.ಸಿ. ಹೊಸಗೌಡರು ಭೇಟಿ ನೀಡಿ ವಿದ್ಯಾರ್ಥಿನಿ ಸಾಧನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗಳ ಸಾಧನೆಗೆ ತಂದೆ ಡಾ.ಶಾರಿಕ್ ಅಹ್ಮದ್ ನಿಂಬಾಳ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.