ಗೋಲ್ಡನ್ ಕ್ವೀನ್ ಅಮೂಲ್ಯ ಜೋಡಿಯಲ್ಲಿ ಸೆಟ್ಟೇರಿರೋ ಚಿತ್ರ ಪೀಕಬೂ ಅಮೂಲ್ಯ ಸುದೀರ್ಘ ಗ್ಯಾಪ್ ನಂತರ ಮಾಡ್ತಿರೋ ಸಿನಿಮಾ. ವಿಭಿನ್ನ ಟೀಸರ್ ಮೂಲಕ ಸಿನಿಮಾ ಸೆಟ್ಟೇರಿಸಿ ಸುದ್ದಿಯಾಗಿದ್ದ ಚಿತ್ರತಂಡ, ಇದೀಗ ಈ ಚಿತ್ರದ ನಾಯಕನ ಪರಿಚಯಿಸುತ್ತಿದೆ.
ನಾಯಕನ ಪರಿಚಯಕ್ಕೆ ವಿಶೇಷ ಟೀಸರ್ ಮಾಡಿರೋ ಪೀಕಬೂ ನಿರ್ದೇಶಕ ಸಂಕ್ರಾಂತಿ ವಿಶೇಷ ಸುಗ್ಗಿ ಸಂಭ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ನಾಯಕ ಶ್ರೀರಾಮ್ ಅಮೂಲ್ಯಗೆ ಈ ಚಿತ್ರದಲ್ಲಿ ಹೀರೋ ಅನ್ನೋದನ್ನ, ಅಮೂಲ್ಯ ಆ್ಯಂಗಲ್ ನಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ.
ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʻಪೀಕಬೂʼ ಸಿನಿಮಾದ ಅಮೂಲ್ಯ ಅವರ ಲುಕ್ ಟೀಸರ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದರು. ಅಮೂಲ್ಯ ಟೀಸರ್ ರಿಲೀಸ್ ಆದ ನಂತರ ಚಿತ್ರಕ್ಕೆ ನಾಯಕ ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ, ಆ ಕುತೂಹಲಕ್ಕೂ ತೆರೆ ಬಿದ್ದಿದೆ. ಕಾರಣ, ನಟಿ ಅಮೂಲ್ಯಗೆ ಜೋಡಿಯಾಗಿ ನಟ ಶ್ರೀರಾಮ್ ಕಾಣಿಸಿಕೊಳ್ಳುತ್ತಿದ್ದಾರೆ.
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ಖ್ಯಾತಿಗಳಿಸಿರುವ ನಟ ಶ್ರೀರಾಮ್ ಇದೀಗ ʻಪೀಕಬೂʼ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. 2008ರಲ್ಲಿ ʻರಿಷಭಪ್ರಿಯʼ ಎಂಬ ಕಿರುಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶ್ರೀರಾಮ್, ಬಳಿಕ ಹಲವು ಧಾರಾವಾಹಿಯಲ್ಲಿ ಬ್ಯುಸಿಯಾದರು. ನಂತರ, ʻಇರುವುದೆಲ್ಲವ ಬಿಟ್ಟುʼ ಸಿನಿಮಾ ಮೂಲಕ ನಾಯಕನಾಗಿ ದೊಡ್ಡ ಪರದೆಮೇಲೆ ಮಿಂಚಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಬಳಿಕ. ʻಗಜಾನನ ಅಂಡ್ ಗ್ಯಾಂಗ್ʼ, ʻಹೊಂದಿಸಿ ಬರೆಯಿರಿʼ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಶ್ರೀರಾಮ್ ಅವರು ಅಮೂಲ್ಯ ಜೊತೆ ʻಪೀಕಬೂʼ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ʻಪೀಕಬೂʼ ಸಿನಿಮಾದ ಹೀರೋ ರಿವಿಲ್ ಟೀಸರ್ ರಿಲೀಸ್ ಆಗಿದ್ದು, ಟೀಸರ್ ಇಂಟ್ರೆಸ್ಟಿಂಗ್ ಆಗಿದೆ. ಟೀಸರ್‌ನಲ್ಲಿ ಶ್ರೀರಾಮ್ ಎರಡು ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ, ಅಮೂಲ್ಯ ಹಾಗೂ ಶ್ರೀರಾಮ್ ಹೊಸ ಕಾಂಬಿನೇಷನ್ ಆಗಿದ್ದು, ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ಅಭಿನಯ ಮಾಡುತ್ತಿದ್ದಾರೆ.
ಇದನ್ನೂ ಓದಿ : ‘ಮ್ಯಾಂಗೋ ಪಚ್ಚ’ಗೆ ಸಾನ್ವಿ ಸುದೀಪ್ ಹಾಡಿನ ಟಚ್..!



















