ಸ್ಯಾಂಡಲ್ ವುಡ್ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಹಿಟ್ 3 ಸಿನಿಮಾ ಯಶಸ್ಸಿನ ನಂತರ ದೇವಿಯ ಮೊರೆ ಹೋಗಿದ್ದಾರೆ.
ನಾನಿ ಜೊತೆ ನಟಿಸಿದ ‘ಹಿಟ್ 3’ (HIT 3) ಸಿನಿಮಾದ ಯಶಸ್ಸಿನ ನಂತರ ಶ್ರೀನಿಧಿ ಶೆಟ್ಟಿ, ಸದ್ಗುರು ಆಶ್ರಮಕ್ಕೆ ಭೇಟಿ ನೀಡಿ ಲಿಂಗ ಭೈರವಿ ಮೊರೆ ಹೋಗಿದ್ದಾರೆ. ಅಲ್ಲಿ ಕೆಲವು ಹೊತ್ತು ಕಾಲ ಕಳೆದಿದ್ದಾರೆ. ಲಿಂಗ ಭೈರವಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಶ್ರೀನಿಧಿ ಶೆಟ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.