ಚಂದನವನದ ಹಾಟ್ ನಟಿ ಶ್ರೀಲೀಲಾಗೆ (Sreeleela) ಈಗ ಟಾಲಿವುಡ್ ನಲ್ಲಿ ಸಾಕಷ್ಟು ಹೆಸರಿದೆ. ಅವರು ಈಗ ಚಿತ್ರದಲ್ಲಿ ನಟಿಸುತ್ತ, ಡ್ಯಾನ್ಸ್ ಗೂ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಟಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಈಗ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಶ್ರೀಲೀಲಾ ಸೊಂಟ ಬಳುಕಿಸಿದ್ದಾರೆ. ಚಿತ್ರ ತಂಡ ನಟಿಯ ಅಫಿಷಿಯಲ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.
ನಮ್ಮ ತಂಡಕ್ಕೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾಗೆ ಸ್ವಾಗತ ಎಂದು ನಟಿಯ ಪೋಸ್ಟರ್ ಶೇರ್ ಮಾಡಿ ‘ಪುಷ್ಪ 2’ ಚಿತ್ರದ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ. ಪೋಸ್ಟರ್‌ನಲ್ಲಿ ಕನ್ನಡತಿ ಶ್ರೀಲೀಲಾ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಕ್ ಎಂಬ ಹಾಡಿಗೆ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಆದರೆ, ಪೋಸ್ಟರ್ ನಿಂದ ಮಾತ್ರ ಶ್ರೀಲೀಲಾ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.
ಸಿನಿಮಾದ ಮೊದಲ ಭಾಗದಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ‘ಪುಷ್ಪ 2’ನಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದಾರೆ. ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಚಿತ್ರವು ಡಿ. 5ರಂದು ತೆರೆಗೆ ಅಪ್ಪಳಿಸಲಿದೆ.