ಧಡಕ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀದೇವಿಯವರ ಪುತ್ರಿ ಜಾನ್ವಿ ಕಪೂರ್ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ.
ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಚೆಂದದ ಫೋಟೋಸ್ ಅಪ್ಲೋಡ್ ಮಾಡುತ್ತಾ ಪಡ್ಡೆ ಹುಡುಗರ ಹಾರ್ಟ್ ಕದ್ದಿರುವ ಈ ಪೋರಿ, ಸದ್ಯ ಪರಮ ಸುಂದರಿ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಜಾನ್ವಿ ಕೆಲವೊಂದು ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೆ ಒಂದು ರ್ಯಾಂಪ್ ವಾಕ್ ವಿಚಾರದಲ್ಲಿ ಸುದ್ದಿಯಾಗಿದ್ದರು. ಇದೀಗ ಮಾಧುರಿ ದೀಕ್ಷಿತ್ ಹಾಗೂ ಶ್ರೀ ದೇವಿ ಹೋಲಿಕೆ ಮಾಡಿರುವ ವಿಚಾರವಾಗಿ ಜನ್ವಿ ಮತ್ತೆ ಸುದ್ದಿಯಾಗಿದ್ದಾರೆ.
ಬೇಟ’ ಸಿನಿಮಾದ ‘ಧಕ್ ಧಕ್..’ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಅಶ್ಲೀಲ ಡ್ಯಾನ್ಸ್ ಮಾಡಿದ್ದರು. ಆ ಸಿನಿಮಾಗೆ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು. ಆದರೆ ‘ಕುದಾ ಗವಾ’ ಸಿನಿಮಾದಲ್ಲಿ ಶ್ರೀದೇವಿ ದ್ವಿಪಾತ್ರ ಮಾಡಿದರು. ಉತ್ತಮವಾಗಿ ನಟಿಸಿದರು. ಆದರೂ ಕೂಡ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಗಲಿಲ್ಲ ಎಂದು ಇನ್ಸ್ಟಾಗ್ರಾಮ್ ಬರೆದಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಆ ಪೋಸ್ಟ್ ಗೆ ನಟಿ ಜಾನ್ವಿ ಕಪೂರ್ ಲೈಕ್ ಮಾಡಿದ್ದಾರೆ. ಈಗ ಜಾನ್ವಿ ಕಪೂರ್ ಲೈಕ್ ಮಾಡಿರುವುದನ್ನು ಕೆಲವರು ಖಂಡಿಸಿದ್ದಾರೆ.

ಪರೋಕ್ಷವಾಗಿ ಆ ಪೋಸ್ಟ್ ಗೆ ಜಾನ್ವಿ ಬೆಂಬಲ ನೀಡಿದರಾ? ಎನ್ನುವ ಪ್ರಶ್ನೆಗಳು ಎದುರಾಗುತ್ತಿದೆ. ಶ್ರೀದೇವಿಯನ್ನು ಹೊಗಳಿದ್ದರಲ್ಲಿ ತಪ್ಪಿಲ್ಲ. ಆದರೆ ಮಾಧುರಿ ದೀಕ್ಷಿತ್ ಅವರದ್ದು ಅಶ್ಲೀಲ ಡ್ಯಾನ್ಸ್ ಎಂದು ಹೇಳಿದ್ದು ಸರಿಯಲ್ಲ. ಯಾಕೆಂದರೆ ಮಾಧುರಿ ಒಬ್ಬ ಅತ್ಯುತ್ತಮ ನಟಿ ಹಾಗೂ ಉತ್ತಮ ಡ್ಯಾನ್ಸರ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.



















