ಬೈಂದೂರು : ಶ್ರೀ ಗೋಪಾಲಕೃಷ್ಣ ಕಲಾ ತಂಡ ಉಳ್ಳೂರು 11, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಳ್ಳೂರ್11, ರೈತ ಸಿರಿ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಗೋಕುಲಾಷ್ಟಮಿಯನ್ನು ರಘುರಾಮ ಶೆಟ್ಟಿ ಸನಾತನ ಕಲಾವೇದಿಕೆಯಲ್ಲಿ ಸಡಗರ ಸಂಭ್ರಮದಲ್ಲಿ ನೆರವೇರಿಸಲಾಯಿತು.
ಶ್ರೀಗೋಪಾಲ ಕೃಷ್ಣ ದೇವರಿಗೆ ತುಳಸಿ ಅರ್ಚನೆ, ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ, ಅನ್ನಸಂತರ್ಪಣೆ ಸೇವೆಯನ್ನು ನೆರವೇರಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಂದ ಮೊಸರು ಕುಡಿಕೆ, ಭಜನಾ ಕಾರ್ಯಕ್ರಮ, ಭಕ್ತಿ ಗೀತೆ, ನೃತ್ಯ ಕಾರ್ಯಕ್ರಮ ಜರುಗಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅನ್ನದಾನಿ ಲಿಂಗಯ್ಯ ಶೆಟ್ಟಿಯವರನ್ನ ಗೌರವಿಸಲಾಯಿತು. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ ಸಂಭ್ರಮಿಸಿದರು.
ಕಂಬದಕೋಣೆ ರೈತ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್ ಪ್ರಕಾಶ್ಚಂದ್ರ ಶೆಟ್ಟಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಮೂಡುಮಠ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಪೂಜಾ ಕೈಂಕರ್ಯಗಳನ್ನು ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಯುವಕರ ತಂಡದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಊರಿನವರ ಸಹಕಾರದಿಂದ ಮುಂದುವರೆಯುವಂತಾಗಲಿ ಎಂದು ಶುಭ ಹಾರೈಸಿದರು.
ದಿನೇಶ್ ಆಚಾರ್ಯ ಕಾರ್ಯಕ್ರಮದ ನೇತೃತ್ವ ವಹಿಸಿದರು. ಗೋಪಾಲ ಉಡುಪರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸೂಲಿಯಣ್ಣ ಶೆಟ್ಟಿ, ವ್ಯವಸ್ಥಾಪನ ಸಮಿತಿ ಶ್ರೀಅಗಸ್ತ್ಯೇಶ್ವರ ದೇವಸ್ಥಾನ ಕಿರಿಮಂಜೇಶ್ವರದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಶ್ರೀಕೊಗಳುಮಕ್ಕಿ ನಂದಿಕೇಶ್ವರ ದೇವಸ್ಥಾನ ಉಳ್ಳೂರ್ 11 ಮುಕ್ತೇಸರ ಸೀತಾರಾಮ್ ಶೆಟ್ಟಿ, ಭುಜಂಗಶೆಟ್ಟಿ ಕೋಕನಾಡು, ಲಿಂಗಯ್ಯ ಶೆಟ್ಟಿ ಸೇನಾಪಪುರ ಮನೆ, ರಾಘವೇಂದ್ರ ಶೆಟ್ಟಿ ಸನಾತನ, ಗೋಪಾಲ ಪೂಜಾರಿ ಪಡುಮನೆ, ಗಣೇಶ್ ದೇವಾಡಿಗ ಹಾಡಿಮನೆ, ರಾಘವೇಂದ್ರ ಶೆಟ್ಟಿ ನಾರ್ಕಳಿ ಮನೆ , ಶಂಕರ ಗಾಣಿಗ, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
