ಕೊಪ್ಪಳ: ಸ್ಪಾಂಜ್ ಐರನ್ ಕಾರ್ಖಾನೆಗಳಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವಿಧಾನಸಭೆ ಕಲಾಪದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಚರ್ಚೆ ನಡೆಸಿದ್ದಾರೆ.
ಹಿರೇಬಗನಾಳ ಸೇರಿ 22 ಹಳ್ಳಿಗಳು ಉಕ್ಕು ಕಾರ್ಖಾನೆಗಳಿಂದ ಪರಿಸರ ಹಾನಿಯಾಗಿದ್ದು ಹಾಗೂ ಈಗ ಈ ಭಾಗದಲ್ಲಿ ಕಪ್ಪು ಹೊಗೆಯಿಂದ ಸ್ಥಳೀಯರಲ್ಲಿ ಅನಾರೋಗ್ಯ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಬೆಳೆದ ಬೆಳೆ ಶೇ 50 ರಷ್ಟು ಇಳುವರಿ ಕಡಿಮೆಯಾಗಿದೆ.ಕಾರ್ಖಾನೆಯ ಕಲುಷಿತ ನೀರು ತುಂಗಭದ್ರಾ ಜಲಾಶಯ ಸೇರುತ್ತದೆ. ಪರಿಸರ ಹಾನಿಯ ಬಗ್ಗೆ ಈಗಾಗಲೇ ವರದಿಗಳಿವೆ. ಈ ವರದಿಗಳನ್ನು ಆಧರಿಸಿ ಕಾರ್ಖಾನೆಗಳ ಧೂಳು ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ನೀಡಿಬೇಕು, ಇಲ್ಲಿವೇ 22 ಹಳ್ಳಿಗಳನ್ನು ಸ್ಥಳಾಂತರಿಸಿ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಚಿವ ಈಶ್ವರ ಖಂಡ್ರೆ ಮತನಾಡಿ, ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಅಧ್ಯಕ್ಷರು ಭೇಟಿ ನೀಡಿದ್ದಾರೆ. 2024ರಲ್ಲಿ ಕಾರ್ಖಾನೆಗಳಿಂದ ಪರಿಸರ ಹಾನಿಯ ಬಗ್ಗೆ ವರದಿ ಇದೆ. ಈಗ ಮತ್ತೆ ದೂರುಗಳು ಬಂದಿವೆ, ಈ ಬಗ್ಗೆ ಪರಿಸರ ಇಲಾಖೆಯ ಸಮಿತಿಯು ವರದಿ ನೀಡಲಿದ್ದು, ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್ ಮಾಡಿದ ಪ್ರೊಫೆಸರ್‌ಗೆ ಅಟ್ಟಾಡಿಸಿ ಹೊಡೆದ ಮೆಡಿಕಲ್ ಸ್ಟೂಡೆಂಟ್ಸ್!


















