ಶ್ರೀನಗರ: ಸಂವಿಧಾನದ 370ನೇ ವಿಧಿ ಈಗ ಐತಿಹಾಸಿಕ ಕ್ಷಣವಾಗಿ ನಿಂತಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವು ಎಂದಿಗೂ ಜಾರಿಯಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ರಾಜ್ಯದಲ್ಲಿನ ಕಳೆದ 10 ವರ್ಷಗಳ ಅವಧಿ ಸುವರ್ಣಾಕ್ಷರದಲ್ಲಿ ಬರೆಯುಂತಿದೆ. ಅಲ್ಲದೇ, ಅಲ್ಲಿ ಈಗ ಉತ್ತಮ ಆಡಳಿತದ ಅವಶ್ಯಕತೆ ಇದೆ. ಹೀಗಾಗಿ ಅಲ್ಲಿನ ಜನ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಹೇಳಿದ್ದಾರೆ.
ಹಿಂದೆ ಇದ್ದ ನಿಯಮಗಳು ಅಲ್ಲಿನ ಯುವಕರು ಬಂದೂಕು ಹಿಡಿಯುವಂತೆ ಮಾಡಿದ್ದವು. ಕಲ್ಲು ಹಿಡಿದು ಬೀಸುವಂತೆ ಮಾಡಿದ್ದವು. ಆದರೆ, ಈಗ ಎಲ್ಲ ರಾಜ್ಯಗಳಂತೆ ಇಲ್ಲಿನ ಯುವಕರು ಮಾದರಿಯಾಗಿ ಬದುಕುವಂತಾಗಿದೆ. ಈ ಚುನಾವಣೆಯಲ್ಲಿ ಫಲಿತಾಂಶ ಯಾವುದೇ ಬಂದರೂ ಗುಜ್ಜರ್, ಬಕರ್ವಾಲ್ ಮತ್ತು ಪಹಾರಿಗಳ ಮೀಸಲಾತಿಗೆ ಕೈ ಹಾಕುವುದಕ್ಕೆ ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ 90 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಸೆ. 18. 25, ಅ. 1ರಂದು ಚುನಾವಣೆ ನಡೆಯಲಿದೆ.