ಬೆಂಗಳೂರು: ವಿಧಾನಸಭೆಯ 18 ಮಂದಿ ಶಾಸಕರು ಅಮಾನತ್ತು ಆಗಿರುವ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಗರಂ ಆಗಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಮಾತನ್ನಾಡಲು ಎಲ್ಲರಿಗೂ ಅವಕಾಶ ಕೊಟ್ಟಿದ್ದೇನೆ. ನಾನು ಅವಕಾಶ ಕೊಟ್ಟ ಮೇಲೆಯೂ ಸುಖಾಸುಮ್ಮನೆ ಅವರು ಗಲಭೆ ಮಾಡಿದ್ದಾರೆ. ಸ್ಪೀಕರ್ ಪೀಠಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ, ಅವರನ್ನು ಅಮಾನತ್ತು ಮಾಡಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.