ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆ, ಹುಬ್ಬಳಿ ವಿಭಾಗದ, ಹುಬ್ಬಳಿಯ ಗದಗ ರಸ್ತೆಯಲ್ಲಿರುವ ರೈಲ್ವೆ ಪ್ರೌಢ ಶಾಲೆ (ಇಂಗ್ಲಿಷ್ ಮೀಡಿಯಂ)ಯಲ್ಲಿ ಖಾಲಿ ಇರುವ ಟಿ.ಜಿ. ಟಿ.ಜಿ. ಶಿಕ್ಷಕರು ಮತ್ತು ಪಿ.ಆರ್.ಟಿ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಹುಬ್ಬಳ್ಳಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ
ಒಟ್ಟು ಹುದ್ದೆಗಳು: 12
ಟಿ.ಜಿ. ಹುದ್ದೆಗಳು : 6
ಪಿ.ಆರ್.ಟಿ ಹುದ್ದೆಗಳು :6
ಟಿ.ಜಿ. ಶಿಕ್ಷಕರ ಹುದ್ದೆಗಳಿಗೆ ಮೇ 27ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:30 ಗಂಟೆಯವರೆಗೆ ಪಿ.ಆರ್.ಟಿ ಶಿಕ್ಷಕರ ಹುದ್ದೆಗಳಿಗೆ ಮೇ 28ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:30 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ನೇಮಕಾತಿ ಹೊಂದಬಹುದಾಗಿದೆ.
ಟಿ.ಜಿ. ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ 26,250 ರೂಪಾಯಿ ಸಂಬಳ ನೀಡಲಾಗುತ್ತದೆ. ಇನ್ನು, ಪಿ.ಆರ್.ಟಿ ಹುದ್ದೆಗಳಿಗೆ ನೇಮಕಗೊಂಡವರಿಗೆ ಮಾಸಿಕ 21,250 ರೂ. ವೇತನ ನೀಡಲಾಗುತ್ತದೆ. 18-65 ವರ್ಷದೊಳಗಿನ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಸಂದರ್ಶನ ನಡೆಯುವ ಸ್ಥಳ :
ರೈಲ್ವೆ ಪ್ರೌಢ ಶಾಲೆ (ಇಂಗ್ಲಿಷ್ ಮೀಡಿಯಂ)
ಗದಗ ರಸ್ತೆ ಹುಬ್ಬಳ್ಳಿ-580020



















