ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯ ಆಗ್ನೇಯ ಮಧ್ಯ ರೈಲ್ವೆಯಲ್ಲಿ (South East Central Railway) ಖಾಲಿ ಇರುವ 56 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಸಿಸ್ಟಂಟ್, ಟೆಕ್ನಿಶಿಯನ್ ಸೇರಿ ಒಟ್ಟು 56 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 2025ರ ಜುಲೈ 24ರೊಳಗೆ ಅರ್ಜಿಯನ್ನು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ ಹೆಸರು : ಆಗ್ನೇಯ ಮಧ್ಯ ರೈಲ್ವೆ (SECR)
ಒಟ್ಟು ಹುದ್ದೆಗಳು : 56
ಉದ್ಯೋಗ ಸ್ಥಳ : ಬಿಲಾಸ್ಪುರ್, ಛತ್ತೀಸ್ ಗಢ
ಅರ್ಜಿಯ ವಿಧಾನ : ಆಫ್ ಲೈನ್
ವಿಳಾಸ : ಮುಖ್ಯ ಸಿಬ್ಬಂದಿ ಅಧಿಕಾರಿ, SECR, ಬಿಲಾಸ್ಪುರ, ಛತ್ತೀಸ್ ಗಢ
ಯಾವ ಹುದ್ದೆ ಎಷ್ಟು ಖಾಲಿ?
ಹಿರಿಯ ವಿಭಾಗ ಎಂಜಿನಿಯರ್: 13
ಜೂನಿಯರ್ ಎಂಜಿನಿಯರ್: 07
ಟೆಕ್ನಿಶಿಯನ್: 02
ಅಸಿಸ್ಟಂಟ್: 34
ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ಮೊದಲು ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಅಧಿಕೃತ ವೆಬ್ ಸೈಟ್ ಆಗಿರುವ secr.indianrailways.gov.inಗೆ ಭೇಟಿ ನೀಡಬೇಕು
- ಅಧಿಸೂಚನೆಯನ್ನು ಗಮನವಿಟ್ಟು ಓದಿಕೊಳ್ಳಬೇಕು, ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು
- ಅಗತ್ಯ ದಾಖಲೆಗಳು, ಪಾಸ್ ಪೋರ್ಟ್ ಸೈಜಿನ ಫೋಟೋ ಹಾಗೂ ಸಹಿ ಲಗತ್ತಿಸಬೇಕು.
- ಭರ್ತಿ ಮಾಡಿದ ಅರ್ಜಿಯನ್ನು ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ, ಎಸ್ ಇ ಸಿ ಆರ್, ಬಿಲಾಸ್ಪುರ, ಛತ್ತೀಸ್ ಗಢ ವಿಳಾಸಕ್ಕೆ ಕಳುಹಿಸಬೇಕು.



















