ಬೆಂಗಳೂರು: ದೇಶದಲ್ಲಿ ಚಿನ್ನವನ್ನು ಶುಭ ಸಮಾರಂಭಗಳಿಗೆ ಮಾತ್ರ ಅಂತ ಖರೀದಿಸುವುದಿಲ್ಲ. ಹೂಡಿಕೆ ದೃಷ್ಟಿಯಿಂದಲೂ ಚಿನ್ನವನ್ನು ಖರೀದಿಸಲಾಗುತ್ತದೆ. ಹಾಗೆಯೇ, ಕಷ್ಟದ ಸಮಯದಲ್ಲಿ ಚಿನ್ನವನ್ನು ಅಡವಿಟ್ಟು, ಸುಲಭವಾಗಿ ಸಾಲ ಪಡೆಯಲು ಕೂಡ ಸಾಧ್ಯವಿದೆ. ಆದರೆ, ಇನ್ನು ಕೆಲವೇ ತಿಂಗಳಲ್ಲಿ ಚಿನ್ನ ಮಾತ್ರವಲ್ಲದೆ, ಬೆಳ್ಳಿಯನ್ನು ಕೂಡ ಬ್ಯಾಂಕ್ ಗಳು, ಎನ್ ಬಿ ಎಫ್ ಸಿಗಳಲ್ಲಿ ಅಡಮಾನವಿಟ್ಟು, ಸಾಲ ಪಡೆಯಬಹುದಾಗಿದೆ.
ಹೌದು, ಚಿನ್ನದ ಜತೆಗೆ ಬೆಳ್ಳಿಯ ಮೇಲೂ ಸಾಲ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ. ಹೊಸ ನಿಯಮಗಳು 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಬೆಳ್ಳಿ ಆಭರಣಗಳು ಇದ್ದರೆ 10 ಕೆಜಿ ವರೆಗೆ ಮತ್ತು ಬೆಳ್ಳಿ ನಾಣ್ಯ 500 ಗ್ರಾಂವರೆಗೆ ಅಡಮಾನ ಇರಿಸಿ ತುರ್ತು ಸಂದರ್ಭಗಳಲ್ಲಿ ಸಾಲ ಪಡೆಯಬಹುದಾಗಿದೆ.
ಬೆಳ್ಳಿ ಆಭರಣಗಳು, ನಾಣ್ಯಗಳನ್ನು ಅಡವಿಟ್ಟು ಸಾಲ ಪಡೆಯಬಹುದು. ಚಿನ್ನದಂತೆಯೇ ಬೆಳ್ಳಿ ಸಾಲಗಳು ಸ್ವೀಕಾರಾರ್ಹವಾಗಲಿವೆ. ಆರ್ ಬಿ ಐ ಹೊಸ ನಿಯಮಗಳಿಂದಾಗಿ ಸಾಲ ಪಡೆಯುವವರಿಗೆ ಮತ್ತಷ್ಟು ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಆರ್ಬಿಐ ಈ ನೀತಿಯನ್ನು ಅನುಷ್ಠಾನಗೊಳಿಸಿದೆ.
ಇದುವರೆಗೆ ಚಿನ್ನದ ಬೆಲೆಯ ಶೇ.75ರಷ್ಟು ಮಾತ್ರ ಸಾಲವನ್ನಾಗಿ ನೀಡಲಾಗುತ್ತಿತ್ತು. ಆದರೆ, ಏಪ್ರಿಲ್ 1ರಿಂದ ಶೇ.85 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತದೆ. ಅಂದರೆ, ನೀವು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಡವಿಟ್ಟರೆ, ನಿಮಗೆ 85 ಸಾವಿರ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ.
ಅಡಮಾನ ಇರಿಸುವವರಿಗೆ ಆರ್ ಬಿ ಐ ಕೆಲ ಸುರಕ್ಷತಾ ನಿಯಮಗಳನ್ನು ಕೂಡ ಜಾರಿಗೆ ತರುತ್ತಿದೆ. ಸಾಲ ಮರುಪಾವತಿ ವಿಫಲವಾದರೆ ಹರಾಜು ಮೊದಲು ಸಾಲಗಾರರಿಗೆ ಸೂಚನೆ ಅಥವಾ ನೋಟಿಸ್ ನೀಡುವುದು ಕಡ್ಡಾಯವಾಗಿದೆ. ಈ ಹೊಸ ನಿಯಮಗಳು ಚಿನ್ನ-ಬೆಳ್ಳಿ ಸಾಲಗಳನ್ನು ಸುರಕ್ಷಿತಗೊಳಿಸುತ್ತವೆ. ಸಣ್ಣ ಅಗತ್ಯಗಳಿಗೆ ಸುಲಭವಾಗಿ ಸಾಲ ಸಿಗುತ್ತದೆ. 2026 ಏಪ್ರಿಲ್ನಿಂದ ಜಾರಿಯಾಗುವ ಈ ಬದಲಾವಣೆಗಳು ಸಾಲಗಾರರ ಹಿತ ಕಾಯುತ್ತವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: 8ನೇ ವೇತನ ಆಯೋಗ ರಚಿಸಿದ ಕೇಂದ್ರ ಸರ್ಕಾರ: ನೌಕರರ ಸಂಬಳದಲ್ಲಿ ಎಷ್ಟು ಏರಿಕೆ?



















