ಬೆಂಗಳೂರು: ಸುಗುಣಶೀಲ ಆಸ್ಪತ್ರೆಯಲ್ಲಿ 50ನೇ ವರ್ಷದ ಮಹೋತ್ಸವ ನಡೆದಿದೆ. ಇದು ಬೆಂಗಳೂರಿಗೆ ಅತ್ಯಂತ ಪ್ರಖ್ಯಾತ ಆಸ್ಪತ್ರೆಯಾಗಿದ್ದು, ಈ ಆಸ್ಪತ್ರೆಯು ಮುಖ್ಯವಾಗಿ ಚಿಕ್ಕ ಮಕ್ಕಳಿಗೆ ಸಂಬಂಧಪಟ್ಟ ತೊಂದರೆಗಳನ್ನು ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಕೊಡುವ ಕೆಲಸವನ್ನು ಮಾಡುತ್ತಾ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಆಂಬುಲೆನ್ಸ್ ವ್ಯವಸ್ಥೆಯ ವಿಚಾರವಾಗಿ ಮಾತನಾಡಿ, ಆಂಬುಲೆನ್ಸ್ ಸರ್ವಿಸ್ ಎಲ್ಲಾ ಕಡೆ ಇದೆ. ಚಾಮರಾಜಪೇಟೆಯಲ್ಲಿ ನಾವೇ ನಿರ್ವಹಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರವೇ ಸಂಪೂರ್ಣ 108 ಆಂಬುಲೆನ್ಸ್ ಗಳನ್ನು ನಿರ್ವಹಣೆ ಮಾಡುವಂತೆ ಕಾರ್ಯ ನಡೆಯುತ್ತಾ ಇದೆ. ಎಲ್ಲಾ ಜಿಲ್ಲೆಗಳಿಗೂ ವೀಸ್ತರಣೆ ಮಾಡುವಂತೆ ಕ್ರಮ ತೆಗೆದುಕೊಳ್ಳುತ್ತೇವೆ. 108 ಸೌಲಭ್ಯ ಹೊಂದಿರುವ ಮೊದಲನೇ ರಾಜ್ಯ ಕರ್ನಾಟಕವಾಗಿದ್ದು, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಎಲ್ಲಾ ಜಿಲ್ಲೆಯಲ್ಲಿ ಆಂಬುಲೆನ್ಸ್ ಸೌಲಭ್ಯ ಸಿಗಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಾಣಂತಿಯರ ಸಾವನ್ನು ಇಳಿಸಬೇಕು ಎಂದು ಸಾಕಷ್ಟ ಕ್ರಮ ಕೈಗೊಳ್ಳಲಾಗಿದೆ. ಗರ್ಭಿಣಿಯವರ ಆರೋಗ್ಯ ವಿಚಾರಣೆ ಮಾಡುವುದು, ಅವರಿಗೆ ಅನೆಮಿಯ ಇದ್ದರೆ ಅದನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡುವುದು, ಹಾಗೂ ಪೌಷ್ಟಿಕಾಂಶದ ಬಗ್ಗೆ ಗಮನಹರಿಸಿದ್ದೇವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 25ರಷ್ಟು ಇಳಿಕೆ ಆಗಿದ್ದು, ಮುಂದಿನ ಮೂರು ವರ್ಷದೊಳಗೆ ಶೇ.58 ರಷ್ಟು ಇರುವ ಸಾವಿನ ಪ್ರಮಾಣವನ್ನು ಶೇ. 20 ರಷ್ಟು ಇಳಿಸುವ ಬಗ್ಗೆ ಗಮನ ಹರಿಸಿದ್ದೇವೆ. ಈ ಬಗ್ಗೆ ನಾನು ನಾಳೆ ಕ್ಯಾಬಿನೆಟ್ ನಲ್ಲೂ ಕೂಡ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಹಾವು ಕಡಿತದಿಂದ ಸಾವು ಹೆಚ್ಚಳವಾದ ವಿಚಾರಕ್ಕೆ ಎಲ್ಲೇ ಹಾವು ಕಚ್ಚಿದರು ಆ ಪ್ರಕರಣದ ಬಗ್ಗೆ ನಮ್ಮ ಗಮನಕ್ಕೆಗೆ ಬರಬೇಕು. ನಗರೀಕರಣ ಹೆಚ್ಚಾಗುತ್ತಾ ಇರುವುದರಿಂದ ಈ ಸಮಸೆ ಆಗುತ್ತಿದೆ. ಇದು ಗಮನಾರ್ಹ ವಿಷಯಾವಾಗಿರುವುದರಿಂದ ಪೂರ್ತಿ ಮಾಹಿತಿ ಸಿಗುತ್ತಿದ್ದು, ಎಲ್ಲಿ ಹೆಚ್ಚು ಪ್ರಕರಣ ಬರುತ್ತದೆಯೊ ಅಲ್ಲಿ ನಾವು ಹೆಚ್ಚಿನ ಗಮನ ವಹಿಸುತ್ತೇವೆ ಎಂದು ಹೇಳಿದ್ದಾರೆ.