ಮೈಸೂರು: ವಿದ್ಯುತ್ ಅವಘಡದಿಂದ ತಾಯಿ, ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹುಣಸೂರು ತಾಲೂಕಿನ ಕಪ್ಪನಾಯನ ಕಾಲೋನಿ – ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ತಾಯಿ ನೀಲಮ್ಮ (42), ಮಗ ಹರೀಶ್ (24) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಜಮೀನಿನ ಬಳಿ ಬೇಲಿಯ ಬಳಿ ಕೆಳ ಭಾಗಕ್ಕೆ ಜೊತು ಬಿದ್ದಿದ್ದ ವಿದ್ಯುತ್ ತಂತಿ ಮೊದಲು ಹರೀಶ್‌ಗೆ ಸ್ಪರ್ಶಿಸಿದೆ. ಇದರಿಂದ ಆತ ಒದ್ದಾಡುತ್ತಿರುವುದನ್ನು ನೋಡಿ ರಕ್ಷಣೆಗೆ ಮುಂದಾದ ತಾಯಿಗೂ ವಿದ್ಯುತ್ ಸ್ಪರ್ಶವಾಗಿದೆ. ಪರಿಣಾಮ ಇರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ವಿದ್ಯುತ್ ಅವಘಡ ಸಂಭವಿಸಿ ತಾಯಿ-ಮಗ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಬಿಗ್‌ಬಾಸ್ ಸೀಸನ್ 12 | ಕಾವ್ಯ ಕಾವ್ಯ ಎಂದ ಗಿಲ್ಲಿ ವಿರುದ್ದ ತಿರುಗಿ ಬಿದ್ದ ರಿಷಾ



















