ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತಿದ್ದಂತೆ ಖುಷಿಯಾಗಿದ್ದಾರೆ.
ಈಗಾಗಲೇ ಸೋಮಣ್ಣ ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ನನಗೆ 45 ವರ್ಷಗಳ ರಾಜಕೀಯ ಅನುಭವಿದೆ. ಹಿರಿಯ ನಾಯಕರ ನಿರೀಕ್ಷೆಯಂತೆ ಉತ್ತಮವಾಗಿ, ಅತ್ಯಂತ ಪ್ರಮಾಣಿಕವಾಗಿ ಕೆಲಸ ಮಾಡುವುದಾಗಿ ಸೋಮಣ್ಣ ಹೇಳಿದ್ದಾರೆ.
ಇನ್ನೊಂದೆಡೆ ಸಚಿವರಾಗುತ್ತಿರುವ ಸೋಮಣ್ಣ ಅವರಿಗೆ ಬಸವರಾಜ ಬೊಮ್ಮಾಯಿ ಅವರು ಶುಭಾ ಕೋರಿ ದ್ದಾರೆ. ಸೋಮಣ್ಣ ಹೊಡೆದ್ರಲ್ಲಾ ಚಾನ್ಸ್ ಎನ್ನುವು ಮೂಲಕ ವಿಷ್ ಮಾಡಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಮಣ್ಣ 1.75 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.