ಶ್ರೀನಗರ: ಭಾರತ ಪಾಕ್ ಗಡಿಯಲ್ಲಿ (International Boundary) ಭಾರತದ ವಿರುದ್ಧ ಪಾಕಿಸ್ತಾನ (Pakistan) ನಡೆಸಿದ ದಾಳಿಯಲ್ಲಿ (Shell Attack) ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ
ಬಿಎಸ್ಎಫ್ ಸಬ್-ಇನ್ಸ್ಪೆಕ್ಟರ್ ಮೊಹಮ್ಮದ್ ಇಮ್ತೆಯಾಜ್ ಹುತಾತ್ಮರಾಗಿರುವ ಯೋಧ ಎಂದು ಗುರುತಿಸಲಾಗಿದೆ. ಅಲ್ಲದೇ, ಪಾಕ್ ನಡೆಸದ ಶೆಲ್ ದಾಳಿಯಲ್ಲಿ 7 ಜನ ಯೋಧರು ಗಾಯಗೊಂಡಿದ್ದಾರೆ.
ಜಮ್ಮುವಿನ ಆರ್ ಎಸ್ ಪುರ ಪ್ರದೇಶದಲ್ಲಿ ಈ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ತಿಳಿಸಲಾಗಿದೆ. ಬಿಎಸ್ಎಫ್ ಮಹಾನಿರ್ದೇಶಕರು ಮತ್ತು ಎಲ್ಲಾ ಅಧಿಕಾರಿಗಳು ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.