ಉಡುಪಿ : ಆಟೋ ಚಲಾಯಿಸುತ್ತಿರುವಾಗಲೇ ಆಟೋದಲ್ಲಿ ಹಾವು ಕಂಡು ಚಾಲಕ ಬೆಚ್ಚಿ ಬಿದ್ದಿರುವ ಘಟನೆ ನಡೆದಿದೆ. ಉಡುಪಿಯಲ್ಲಿ ಈ ಘಟನೆ ನಡೆದಿದೆ. ಹಾವು ಕಂಡ ಕೂಡಲೇ ಚಾಲಕ ಆಟೋ ನಿಲ್ಲಿಸಿ ಹೊರ ಬಂದು ಸೇಫ್ ಆಗಿದ್ದಾನೆ.
ಆಟೋ ಒಳ ಭಾಗದ ಡ್ಯಾಶ್ ಬೋರ್ಡ್ ಬಾಕ್ಸ್ ನಲ್ಲಿ ಹಾವು ಅವಿತಿತ್ತು. ಸಿಲೋನ್ ಕ್ಯಾಟ್ ಹಾವು ಆಟೋ ಡ್ಯಾಶ್ ಬೋರ್ಡ್ ಒಳಗೆ ಹೇಗೆ ಹೋಗಿದೆ ಎನ್ನುವುದೇ ಅಚ್ಚರಿ ಮೂಡಿಸಿದೆ.
ಆಟೋ ಚಲಾಯಿಸುತ್ತಿರುವಾಗಲೇ ಸ್ಟೋರೇಜ್ ಬಾಕ್ಸ್ ಮೂಲಕ ಏಕಾಏಕಿ ಹಾವು ಹೊರ ಬಂದಿರುವುದನ್ನು ನೋಡಿ ಚಾಲಕ ಹೌಹಾರಿ ಹೋಗಿದ್ದಾರೆ.
ಹಾವನ್ನು ಕಂಡು ಒಮ್ಮಿಂದೊಮ್ಮೆಲೆ ಹೌಹಾರಿದ ಚಾಲಕ ಚಲಾಯಿಸುತ್ತಿರುವಾಗಲೇ ನಿಯಂತ್ರಣ ತಪ್ಪಿ, ಕೂದಲೆಳೆ ಅಂತರದಲ್ಲಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾರೆ.
ತಕ್ಷನವೇ ಉರಗ ತಜ್ಞ ಪ್ರಾಣೇಶ್ ಪರ್ಕಳ ಅವರನ್ನು ಸಂಪರ್ಕಿಸಿ ಹಾವನ್ನು ಸುರಕ್ಷಿತವಾಗಿ ಹೊರತೆಗೆದು ಹೊರಬಿಟ್ಟಿದ್ದಾರೆ.