ಕೊಪ್ಪಳ: ಜನವಸತಿ ಪ್ರದೇಶದಲ್ಲಿ ಕೆರೆ ಹಾವುಗಳ ಮಿಲನದ ಅದ್ಭುತ ದೃಶ್ಯ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ತಾಲೂಕಿನ ಹೊಸಹಳ್ಳಿ ಗ್ರಾಮದ ಲೇಔಟ್ ಒಂದರಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ನಂತರ ಅಲ್ಲಿನ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹೊಸಳ್ಳಿ ಗ್ರಾಮದ ಉರಗ ರಕ್ಷಕ ಆಗಮಿಸಿ ಹಾವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.