ದಾವಣಗೆರೆ: ಉರಗ ತಜ್ಞ ಸ್ನೇಕ್ ಕಿರಣ್ 4 ನಾಗರ ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ತೇವರಚಟ್ನಳ್ಳಿ ಗ್ರಾಮದ ಶರಣ್ ಎಂಬುವವರ ಹಿತ್ತಲಿನಲ್ಲಿ ಇದ್ದ ನಾಲ್ಕು ನಾಗರ ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ.
ಭಾನುವಾರ ಕುಟುಂಬಸ್ಥರು ಹೂವು ಕೀಳಲು ಹೋಗಿದ್ದ ಸಂದರ್ಭದಲ್ಲಿ ಹೂವಿನ ಸಸಿ ಕೆಳಗೆ ಹಾವಿನ ಮರಿಗಳು ಕಂಡು ಬಂದಿವೆ. ಮರಿ ಹಾವುಗಳೊಂದಿಗೆ ತಾಯಿ ಹಾವು ಕೂಡ ಇರಬೇಕು ಎಂದು ಕುಟುಂಬಸ್ಥರು ಆತಂಕಗೊಂಡಿದ್ದರು. ಈ ವೇಳೆ ಉರಗ ತಜ್ಞ ಸ್ನೇಕ್ ಕಿರಣ್ ಆಗಮಿಸಿ ಹಾವುಗಳನ್ನು ರಕ್ಷಿಸಿದ್ದಾರೆ.