ಬೆಂಗಳೂರು : ಮಳೆಗಾಲದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯದಲ್ಲಿ ಈ ವರ್ಷ ಹಾವು ಕಡಿತದಿಂದ 79 ಜನರು ಮೃತ ಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶದಿಂದ ಬಹಿರಂಗವಾಗಿದೆ.
3 ದಿನಗಳ ಹಿಂದೆ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಹಾವು ಕಚ್ಚಿ ಪ್ರಕಾಶ್ ಎಂಬಾತ ಮೃತ ಪಟ್ಟ ಪ್ರಕರಣ ವರದಿಯಾಗಿತ್ತು. ರಾಜ್ಯದಲ್ಲಿ ಜನವರಿ 1 ರಿಂದ ಆಗಸ್ಟ್ 17 ತನಕ 13,494 ಹಾವು ಕಡಿತ ಪ್ರಕರಣಗಳು ದಾಖಲಾಗಿದೆ.
ಈ ವರ್ಷ ಹಾವು ಕಡಿತದಿಂದ 79 ಜನರು ಮೃತಪಟಟ್ಟಿದ್ದಾರೆ. ಕಳೆದೊಂದು ವಾರದಲ್ಲಿ 394 ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ಏಳು ಮಂದಿ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.