ಕೊಚ್ಚಿ: ಹಲವು ಯುವಕರನ್ನು ಕಿಡ್ನಿ ಕಸಿ ಮಾಡಲು ಇರಾನ್ ಗೆ ಕಳ್ಳಸಾಗಣೆ ಮಾಡಲಾಗಿದ್ದು, ಈ ಪ್ರಕರಣವನ್ನು ಬೇಧಿಸಿದ್ದಾರೆ.
ಹೈದರಾಬಾದ್ ಮತ್ತು ಬೆಂಗಳೂರಿನಿಂದ ಹಲವಾರು ಯುವಕರನ್ನು ಕಿಡ್ನಿ ಕಸಿ (kidney transplantation) ಮಾಡಲು ಇರಾನ್‌ಗೆ ಕಳ್ಳಸಾಗಣೆ ಮಾಡಲಾಗಿದೆ. ಕೇರಳದ (Kerala) ಸಂಪರ್ಕ ಹೊಂದಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಗಾಂಗಗಳ ಕಳ್ಳಸಾಗಣೆ ದಂಧೆಯನ್ನು(organ trafficking racket) ಪೊಲೀಸರು ಭೇದಿಸಿದ್ದಾರೆ.
ತ್ರಿಶ್ಶೂರ್ ಮೂಲದ ವ್ಯಕ್ತಿಯ ಬಂಧನ ಮತ್ತು ಮತ್ತೊಬ್ಬನನ್ನು ಕೊಚ್ಚಿಯಲ್ಲಿ ಬಂಧಿಸಿದ ನಂತರ ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. ಅಂಗಾಂಗ ದಾನಕ್ಕಾಗಿ ಇರಾನ್‌ಗೆ ಕರೆದೊಯ್ದ ಕೆಲವು ಜನರು ಅಲ್ಲಿ ಸಾವಿಗೀಡಾಗಿದ್ದಾರೆ. ಎನ್‌ಐಎ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳು ಕೂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಅಂಗಾಂಗ ಕಳ್ಳಸಾಗಣೆ ದಂಧೆಯ ಶಂಕಿತ ಸದಸ್ಯ ತ್ರಿಶ್ಶೂರ್ ವಲಪ್ಪಾಜಡ್ ನ ಸಬಿತ್ ನಾಸರ್ (30) ನನ್ನು ಕೊಚ್ಚಿ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಸಬಿತ್‌ಗೆ ಸಹಾಯ ಮಾಡಿದ ಕೊಚ್ಚಿ ಮೂಲದ ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.