ಬೆಂಗಳೂರು | ವಿದೇಶಗಳಿಂದ ಅಕ್ರಮವಾಗಿ ನಕಲಿ ಸಿಗರೇಟ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಪತ್ತೆಹಚ್ಚಿ ತಂದೆ, ಮಗ ಸೇರಿ ಐವರನ್ನು ಬಂಧಿಸಿದ್ದಾರೆ.
ಅಬ್ದುಲ್ ಬಷೀದ್ ಹಾಗೂ ಮಗ ಮಹಮದ್ ಆಶಿಕ್ ಸೇರಿದಂತೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ, ಗುಲಾಮ್ ಹುಸೇನ್ ಖಾನ್ ಬಂಧಿತ ಆರೋಪಿಗಳು. ನಕಲಿ ಸಿಗರೇಟ್ ಜಾಲದ ಬಗ್ಗೆ ಅನ್ವೇಷ್ ಐಪಿಆರ್ ಸಂಸ್ಥೆ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದಾರೆ.
ಅಕ್ರಮ ದಂಧೆಯನ್ನು ತಂದೆ, ಮಗನೇ ಸಂಘಟಿತವಾಗಿ ನಡೆಸುತ್ತಿದ್ದರು ಎಂದು ತನಿಖೆಯ್ಲಿ ಗೊತ್ತಾಗಿದೆ. ಕಾಂಬೋಡಿಯಾದಲ್ಲಿ ಕಡಿಮೆ ದರದಲ್ಲಿ ಖರೀದಿಸಿದ ನಕಲಿ ಬ್ರಾಂಡ್ನ ಸಿಗರೇಟ್ಗಳನ್ನ ಹಾಂಗ್ಕಾಂಗ್, ಕ್ಯಾಲಾಂಲಪುರ ಹಾಗೂ ಸಿಂಗಪುರದಿಂದ ಅಕ್ರಮವಾಗಿ ಬೆಂಗಳೂರಿಗೆ ತರಲಾಗುತ್ತಿತ್ತು. ಆರೋಪಿಗಳು ಇಲ್ಲಿ ಹೆಚ್ಚಿನ ಬೆಲೆಗೆ ನಕಲಿ ಸಿಗರೇಟ್ ಮಾರಾಟ ಮಾಡಿ ಲಾಭಗಳಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನು ಆರೋಪಿಗಳಿಂದ ಸುಮಾರು ₹50 ಲಕ್ಷ ಮೌಲ್ಯದ 20 ಕಾರ್ಟನ್ ನಕಲಿ ಸಿಗರೇಟ್ ಬಾಕ್ಸ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : 12 ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವು


















