ಮುಂಬೈ: ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮದುವೆ ಸಂಭ್ರಮದಲ್ಲಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ಮಂಧಾನ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪಲಾಶ್ ಹಾಗೂ ಸ್ಮೃತಿ ಮಂಧಾನ ಅವರ ಮೆಹಂದಿ, ಅರಿಶಿಣ ಶಾಸ್ತ್ರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಭಾರತೀಯ ಕ್ರಿಕೆಟ್ ಟೀಂ ವನಿತೆಯರು ಸ್ಮೃತಿ ಮದುವೆಯಲ್ಲಿ ಸಖತ್ ಹೆಜ್ಜೆ ಹಾಕಿ ಮಿಂಚಿದ್ದರು. ಇದೀಗ ವಧು- ವರರ ನೃತ್ಯ ಕಾರ್ಯಕ್ರಮ ವೈರಲ್ ಆಗಿದೆ.
ಸ್ಮೃತಿ ಮತ್ತು ಪಲಾಶ್ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಪಲಾಶ್ ಅವರ ಕುತ್ತಿಗೆಗೆ ಸ್ಮೃತಿ ಹಾರ ಹಾಕಿದ್ದಾರೆ. ವೀಡಿಯೊಗಳಲ್ಲಿ ಸ್ಮೃತಿ ಮತ್ತು ಪಲಾಶ್ ‘ಸಲಾಮ್-ಎ-ಇಷ್ಕ್’ ಚಿತ್ರದ ‘ತೆನು ಲೆ ಕೆ ಮೈ ಜವಾಂಗಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಪ್ರದರ್ಶನದ ಸಮಯದಲ್ಲಿ, ಜೋಡಿ ತಮ್ಮ ನೃತ್ಯವನ್ನು ಪ್ರಾರಂಭಿಸುವ ಮೊದಲು ಸ್ಮೃತಿ ಪಲಾಶ್ ಅವರ ಕುತ್ತಿಗೆಗೆ ಹಾರವನ್ನು ಹಾಕಿದರು. ಮತ್ತೊಂದು ವೀಡಿಯೊದಲ್ಲಿ ಪಲಾಶ್ ‘ಗುಲಾಬಿ ಆಂಖೇ’ ಎಂಬ ಐಕಾನಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಸಂಗೀತ ರಾತ್ರಿಗೂ ಮುನ್ನ, ಮೆಹಂದಿ ಸಮಾರಂಭದ ಹಲವಾರು ಚಿತ್ರಗಳು ವೈರಲ್ ಆಗಿದ್ದವು. ಸ್ಮೃತಿ ಸಾಂಪ್ರದಾಯಿಕ ನೇರಳೆ ಉಡುಪನ್ನು ಧರಿಸಿದ್ದರೆ, ಪಲಾಶ್ ಈ ಕಾರ್ಯಕ್ರಮಕ್ಕಾಗಿ ಕಸೂತಿ ಮಾಡಿದ ಜಾಕೆಟ್ ಹೊಂದಿರುವ ಕ್ರೀಮ್ ಕುರ್ತಾವನ್ನು ಹಾಕಿಕೊಂಡಿದ್ದರು. ಕನ್ನಡದ ಶ್ರೇಯಾಂಕಾ ಪಾಟೀಲ್ ಸೇರಿದಂತೆ ಹಲವು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಮೆಹಂದಿ ಶಾಸ್ತ್ರದ ವೇಳೆ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ.
ಇದನ್ನೂ ಓದಿ : ದಕ್ಷಿಣ ಆಫ್ರಿಕಾದಲ್ಲಿ ಜಿ-20 ಶೃಂಗಾಸಭೆ | ಜಾಗತಿಕ ಅಭಿವೃದ್ಧಿಗಾಗಿ ಮೋದಿಯ ʼಪಂಚ ಸೂತ್ರʼ



















