2004ರ ಆರಂಭದಿಂದಲೂ ಅದ್ಭುತ ಫಾರ್ಮ್‌ನಲ್ಲಿರುವ ಭಾರತ ಮಹಿಳೆಯರ ಕ್ರಿಕೆಟ್ ತಂಡ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ (Smriti Mandhana) ಇನ್ನಷ್ಟು ಸಾಧನೆಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಅವರು ಏಕದಿನ ಮಾದರಿಯಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಪ್ರಸ್ತುತ ತಂಡದ ನಾಯಕಿಯಾಗಿರುವ ಅವರು ಐರ್ಲೆಂಡ್ ವಿರುದ್ಧ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ವೇಗದ ಶತಕದ ಹೊಸ ದಾಖಲೆ ಬರೆದರು.
ಬುಧವಾರ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಈ ಅಮೋಘ ಸಾಧನೆ ಮಾಡಿದ್ದಾರೆ. ಈ ಹಿಂದೆ ಭಾರತದಲ್ಲಿ ವೇಗದ ಶತಕ ದಾಖಲಿಸಿದ ಕೀರ್ತಿ ಹರ್ಮನ್‌ಪ್ರೀತ್ ಕೌರ್ ಅವರ ಹೆಸರಿನಲ್ಲಿತ್ತು. ಮಂದಾನ ಈ ದಾಖಲೆಯನ್ನು ಮುರಿದು ಅಲ್ಲಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿ ಮಂದಾನ 10 ಶತಕಗಳನ್ನು ಸಿಡಿಸಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಅವರ ದಕ್ಷಿಣ ಆಫ್ರಿಕಾ ವಿರುದ್ಧ 87 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ದಾಖಲೆಯಾಗಿತ್ತು. ಮಂದಾನಾ 70 ಎಸೆತಗಳಲ್ಲಿ ಶತಕ ಸಿಡಿಸಿ ಕೌರ್ ದಾಖಲೆ ಮುರಿದರು.
ಮಹಿಳಾ ಏಕದಿನ ಪಂದ್ಯಗಳಲ್ಲಿ 15 ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯಾದ ಮೇಗ್ ಲ್ಯಾನಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್‌ನ ಬೇಟ್ಸ್ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಟ್ಯಾಮಿ ಹಾಗೂ ಭಾರತದ ಮಂದಾನಾ ತಲಾ 10 ಶತಕಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತ ಮಹಿಳೆಯರ ವೇಗವಾದ ಶತಕಗಳು…
- ಸ್ಮೃತಿ ಮಂಧಾನಾ: 70 ಎಸೆತಗಳಲ್ಲಿ ಶತಕ (ಐರ್ಲೆಂಡ್ ವಿರುದ್ಧ)
- ಹರ್ಮನ್‌ಪ್ರೀತ್ ಕೌರ್: 87 ಎಸೆತಗಳಲ್ಲಿ ಶತಕ (ದಕ್ಷಿಣ ಆಫ್ರಿಕಾ ವಿರುದ್ಧ)
- ಹರ್ಮನ್‌ಪ್ರೀತ್ ಕೌರ್: 90 ಎಸೆತಗಳಲ್ಲಿ ಶತಕ (ಆಸ್ಟ್ರೇಲಿಯಾ ವಿರುದ್ಧ)
- ಜೆಮಿಮಾ ರೋಡ್ರಿಗ್ಸ್: 90 ಎಸೆತಗಳಲ್ಲಿ ಶತಕ (ಐರ್ಲೆಂಡ್ ವಿರುದ್ಧ)
- ಹಾ.ಡಿಯೋಲ್: 98 ಎಸೆತಗಳಲ್ಲಿ ಶತಕ (ವಿಂಡೀಸ್ ವಿರುದ್ಧ)