ಬೆಂಗಳೂರು: ಸಾವಿರ ಕೆಜಿ ಗಂಧದ ಕಟ್ಟಿಯಲ್ಲಿ ಎಸ್.ಎಂ ಕೃಷ್ಣ (SM Krishna) ಅವರ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಶಾಸಕ ಗಣಿಗ ರವಿ ಹೇಳಿದ್ದಾರೆ.
ಎಸ್.ಎಂ. ಕೃಷ್ಣ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ರೈತರಿಗೆ ಗಂಧದ ಮರ ಬೆಳೆಸಲು ಅವಕಾಶ ನೀಡಿದ್ದರು. ಹೀಗಾಗಿ ರೈತರು ಗಂಧದ ಮರ ಬೆಳೆದು ಶ್ರೀಮಂತರಾಗಿದ್ದಾರೆ. ಹೀಗಾಗಿ 1 ಸಾವಿರ ಗಂಧದ (Sandalwood) ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅವರ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದಿದ್ದಾರೆ.
ಮಂಡ್ಯದ ನೂತನ ಹೆರಿಗೆ ಆಸ್ಪತ್ರೆಗೆ ಎಸ್.ಎಂ. ಕೃಷ್ಣ ಅವರ ಹೆಸರು ಇಡಲಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೇ, ಜಿಲ್ಲಾ ಕೇಂದ್ರದ ಪಾರ್ಕ್ ಗೆ ಅವರ ಹೆಸರು ಇಡಲಾಗುತ್ತದೆ ಎಂದಿದ್ದಾರೆ.