ಮಂಗಳೂರು : ವಿದೇಶದಲ್ಲಿ ಕುಳಿತು ಯುವತಿಯರಿಗೆ ಪ್ರೀತಿ-ಮದುವೆ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯ ಕಪಟ ಪ್ರೇಮದಾಟ ಬಯಲಾಗಿದೆ. ಈ ಬಗ್ಗೆ ಮಂಗಳೂರು ನಗರದ ಬಜ್ಪೆ ನಿವಾಸಿ ಮನೀಶ್ ವಿರುದ್ಧ ಅವರ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗಿದ್ದ ಮನೀಶ್, ಮದುವೆಗೂ ಮುನ್ನ ಹಲವು ಯುವತಿಯರೊಂದಿಗೆ ಲವ್ ಅಫೇರ್ ಹೊಂದಿದ್ದನು. ಪ್ರೀತಿ, ಮದುವೆ ಮತ್ತು ಭವಿಷ್ಯದ ಭರವಸೆ ನೀಡುವ ಮೂಲಕ ಯುವತಿಯರಿಂದ ಹಣ ಪಡೆದು ಬಳಿಕ ಸಂಪರ್ಕ ಕಡಿತಗೊಳಿಸುತ್ತಿದ್ದ ಎನ್ನಲಾಗಿದೆ.
ಹಣ ವಾಪಸ್ ಕೇಳಿದಾಗ ಪ್ರತಿಯೊಬ್ಬರಿಗೂ ತನಿಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಿ ಸಹಾನುಭೂತಿ ಗಳಿಸುವ ನಾಟಕವಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಬಳಿಕ ಲವ್ ಬ್ರೇಕ್ ಅಪ್ ಮಾಡಿಕೊಂಡು ದೂರವಾಗುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣ, ವಿಶೇಷವಾಗಿ ಟಿಕ್‌ಟಾಕ್ ಮೂಲಕ ಯುವತಿಯರ ಪರಿಚಯ ಮಾಡಿಕೊಂಡು ವಂಚನೆ ನಡೆಸುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಗಂಡನ ಪ್ರೇಮ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಯಲುಗೊಳಿಸಿದ್ದು, ಇಂತಹ ವಂಚಕನನ್ನು ನಂಬಿ ಮತ್ತಾರೂ ಮೋಸ ಹೋಗಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ‘ಇತಿಹಾಸ ಬದಲಿಸಲು ಸಾಧ್ಯವಿಲ್ಲ’ | ಭಾರತದ ವಿರುದ್ಧ ಸೋಲು ಒಪ್ಪಿಕೊಂಡ್ರಾ ಪಾಕ್ ನಾಯಕ ಸಲ್ಮಾನ್ ಆಘಾ?



















