ಬೆಂಗಳೂರು : ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಎಸ್‌ಐಟಿ ಅಧಿಕಾರಿಗಳ ಇಲ್ಲಿಯವರೆಗಿನ ತನಿಖೆಯಲ್ಲಿ ರಾಯ್ ಆತ್ಮಹತ್ಯೆ ಹಿಂದಿನ ಕಾರಣಗಳು ಮೇಲ್ನೋಟಕ್ಕೆ ರಿವೀಲ್ ಆಗಿದೆ.
ಸಿ.ಜೆ.ರಾಯ್ ಆತ್ಮಹತ್ಯೆಯ ಹಿಂದಿನ ಕಾರಣಗಳು ಎಸ್‌ಐಟಿ ಮೂಲಗಳಿಂದ ಲಭ್ಯವಾಗಿದೆ. ಒಂದೇ ಕಾರಣದಿಂದ ರಾಯ್ ಅವರು ನೊಂದು ಸಾವನ್ನಪ್ಪಿಲ್ಲ. ಬದಲಾಗಿ ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಇಲ್ಲಿಯವರೆಗಿನ ಎಸ್‌ಐಟಿ ತನಿಖೆಯ ವೇಳೆ ಬಹಿರಂಗವಾಗಿದೆ ಎನ್ನಲಾಗುತ್ತಿದೆ. ಲ್ಯಾವೀಸ್ ಲೈಫ್, ಮಾನಸಿಕ ಒತ್ತಡ, ವ್ಯವಹಾರಿ ಸಮಸ್ಯೆಗಳು ಹೀಗೆ ಹಲವು ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಎಸ್‌ಐಟಿ ಅಧಿಕಾರಿಗಳು ಅಷ್ಟಕ್ಕೆ ಸುಮ್ಮನಾಗದೇ ಮತ್ತಷ್ಟು ಕಾರಣಗಳು ಹುಡುಕಲು ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದ ರೂಂನಲ್ಲಿ ಸಿಕ್ಕಿರುವ ಡೈರಿ, ಶೂಟ್ ಮಾಡಿಕೊಂಡ ಪಿಸ್ತೂಲ್, ಮೊಬೈಲ್, ರೂಂ ಡೋರ್‌ನ ಲಾಕರ್ ಹೀಗೆ 30ಕ್ಕೂ ಹೆಚ್ಚು ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಮುಂದಿನ ವಾರದ ಒಳಗಾಗಿ ಎಫ್‌ಎಸ್‌ಎಲ್ ವರದಿ ಎಸ್‌ಐಟಿ ಅಧಿಕಾರಿಗಳ ಕೈ ಸೇರಲಿದೆ. ಎಫ್‌ಎಸ್‌ಎಲ್ ವರದಿ ಕೈ ಸೇರುತ್ತಿದ್ದಂತೆ ಅಂತಿಮ ವರದಿ ಸಲ್ಲಿಕೆ ಮಾಡಲು ಎಸ್‌ಐಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಸರ್ವೆಂಟ್ ಹುದ್ದೆಗಳ ನೇಮಕಾತಿ | 46 ಸಾವಿರ ರೂ. ಸ್ಯಾಲರಿ



















