ಹುಬ್ಬಳ್ಳಿ : ಧರ್ಮಸ್ಥಳ ಪ್ರಕರಣದ ಬಗ್ಗೆ ಆತುರದಿಂದ ಮಾತಾನಾಡುವುದು ಸರಿಯಲ್ಲ. ಸರ್ಕಾರ ಈಗಾಗಲೇ ಪ್ರಕರಣವನ್ನು ಎಸ್.ಐ.ಟಿ ಗೆ ಕೊಟ್ಟಿದೆ. ಪ್ರಕರಣದ ಬಗ್ಗೆ ತನಿಖೆಯಾಗುತ್ತದೆ. ತನಿಖಾ ವರದಿ ಬರಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಾಡ್, ಬಿಜೆಪಿಯವರು ನಾವು ಏನು ಮಾಡಿದರು ಮಾತಾಡುತ್ತಾರೆ. ಮೋದಿಯವರ ಅವಧಿ ಮುಗಿಯುವರೆಗೂ ಯಾರೂ ಮಾತಾಡುವಂತಿಲ್ಲ. ಇ.ಡಿ ಬಗ್ಗೆ ಸುಪ್ರೀಂ ಕೋರ್ಟ್ ಅನೇಕ ಬಾರಿ ಹೇಳಿದೆ. ರಾಜಕೀಯಕ್ಕಾಗಿ ಇ.ಡಿ ಬಳಸುತಿದ್ದಾರೆಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ ಎಂದು ಹೇಳಿದ್ದಾರೆ.
ನೆಗಟಿವ್ ಇದ್ದರೆ ದೇಶದಲ್ಲಿ ಹೊರಬರಲ್ಲ. ದೇಶದಲ್ಲಿ ಕಷ್ಟಗಳೇ ಇಲ್ಲವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ದೇಶದ ಪ್ರಧಾನಿ ಈವರೆಗೆ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಪೆಹಲ್ಗಾಮ್ ಆಯ್ತು ನಂತರ 8-10 ವಿದೇಶ ಪ್ರವಾಸವನ್ನೂ ಮೋದಿ ಮುಗಿಸಿದರು. ಈಗ ಬಿಹಾರ್ ಚುನಾವಣೆಯಲ್ಲಿದ್ದಾರೆ ಎಂದವರು ಹೇಳಿದ್ದಾರೆ.
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗೋವಾಕ್ಕೆ ಬೇಕಾದಾಗ ಪರಿಸರ ಕ್ಲಿಯರನ್ಸ್ ಕೊಡುತ್ತಾರೆ. ಆದರೆ ನಮಗೆ ಬೇಕಾದಾಗ ಪರಿಸರ ಕ್ಲಿಯರೆನ್ಸ್ ಕೊಡುತ್ತಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಯಾರು ಮಾತನಾಡುತ್ತಿಲ್ಲ ಎಂದವರು ಹೇಳಿದ್ದಾರೆ.



















