ಚಿಕ್ಕಬಳ್ಳಾಪುರ: ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಅಕ್ಕ- ತಂಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ (Chikkaballpura) ಜಿಲ್ಲೆಯ ಚೇಳೂರು (Chelur) ತಾಲೂಕಿನ ಕುರಪ್ಪಲ್ಲಿ ಎಂಬಲ್ಲಿ ನಡೆದಿದೆ. ರಾಧಾ(17), ಸಾಹಿತಿ(14) ಸಾವನ್ನಪ್ಪಿದ ಸಹೋದರಿಯರು. ಬೇಸಿಗೆ ರಜೆ (Summer Holiday) ಇದ್ದ ಹಿನ್ನೆಲೆಯಲ್ಲಿ ತಾಯಿಯ ಜೊತೆ ತೋಟದಲ್ಲಿ ಕೆಲಸ ಮಾಡುವಾಗ ಕೃಷಿ ಹೊಂಡಕ್ಕೆ ಆಳವಡಿಸಿದ್ದ ಪೈಪ್ ಸರಿ ಮಾಡಲು ಹೋಗಿ ಇಬ್ಬರು ಬಿದ್ದಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.