ಶಿರಸಿ ನಗರಸಭೆಯ ಸದಸ್ಯ ಗಣಪತಿ ನಾಯಕ್ ಲಂಚ ಸ್ವೀಕರಿಸುತಿದ್ದಾಗ ರೆಡ್ ಹ್ಯಾಂಡ್ ಅಗಿ ಸಿಕ್ಕಿಬಿದ್ದಿದ್ದಾರೆ.
ಗಣಪತಿ ನಾಯಕ್ ಹೆಸರು ಈ ಹಿಂದೆ ಶಿರಸಿಯಲ್ಲಿ ನೆಡೆದ ಪೈಪ್ ಕಳ್ಳತನ ಪ್ರಕರಣದಲ್ಲೂ ಕೇಳಿ ಬಂದಿತ್ತು,ಇದೀಗ ಲಂಚದ ವಿಚಾರವಾಗಿ ಮತ್ತೆ ಮುನ್ನೆಲೆಗೆ ಬಂದಿದೆ.
ಲೀಸ್‌ಗೆ ಪಡೆದ ಜಾಗದ ವಿಚಾರವಾಗಿ ಶಿರಸಿ ನಗರಸಭೆಯ ಸದಸ್ಯ ಗಣಪತಿ ನಾಯಕ್ ಹಾಗೂ ನಗರಸಭೆ ಅಧಿಕಾರಿ ಆರ್.ಎಂ. ವರ್ಣೇಕರ್ ,ರಮೇಶ್ ಎಂಬುವವರಿಂದ ಕಾರಿನಲ್ಲಿ ಕುಳಿತು 3 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತಿದ್ದರು. ಈ ಸಂಬಂಧ ಸ್ಪಷ್ಟ ಮಾಹಿತಿ ಪಡೆದಿದ್ದ ಲೋಕಾಯುಕ್ತ ಅಧಿಕಾರಿಗಳು ದಿಢಿರ್ ದಾಳಿ ನೆಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.