ಹದಿಮೂರು ವರ್ಷಗಳಿಂದ ಐಸಿಸಿ ಕಪ್ ಹೊಡೆಯಲು ತಡಕಾಡುತ್ತಿದ್ಡ ಟೀಮ್ ಇಂಡಿಯಾ, ಈ ಬಾರಿಯ ಟಿ20 ವಿಶ್ವಕಪ್ ಎತ್ತಿಹಿಡಿದು ಭರ್ಜರಿ ಸಾಧನೆ ಮಾಡಿತು. ರೋಹಿತ್ ಶರ್ಮಾ ನಾಯಕತ್ವದ ತಂಡದವರ ಸಾಂಘಿಕ ಪ್ರಯತ್ನದಲ್ಲಿ ಭಾರತ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಸಂಭ್ರಮದಲ್ಲಿ ಪಾಲುದಾರನಾಗಿದ್ದ ಕ್ರಿಕೆಟಿಗ ಮಹಮ್ಮದ್ ಸಿರಾಜ್ ಗೆ ತವರಿನ ತೆಲಂಗಾಣ ಸರ್ಕಾರ ಭರ್ಜರಿ ಲಾಭ ತಂದೊಡ್ಡಿದೆ.

ಹೌದು. ಈ ಬಾರಿಯ ವಿಶ್ವ ವಿಜೇತ ಕ್ರಿಕೆಟ್ ತಂಡದ ಸದಸ್ಯ ಮಹಮ್ಮದ್ ಸಿರಾಜ್, ತೆಲಂಗಾಣ ಮುಖ್ಯ ಮಂತ್ರಿ ರೇವಂತ್ ರೆಡ್ಡಿ ಆಹ್ವಾನನದೊಂದಿಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಭಾರತ ತಂಡದ ಸಾಧನೆ ಬಗ್ಗೆ ಪ್ರಶಂಸೆಯ ಮಾತಾಡಿದ ಮುಖ್ಯಮಂತ್ರಿ ರಾಜ್ಯದ ಪರವಾಗಿ ಸಿರಾಜ್ ರನ್ನು ಸನ್ಮಾನಿಸಿದರು. ಹಾಗೂ ಅದೇ ಸಂಭ್ರಮದಲ್ಲಿ ಅವರಿಗೆ ಸರ್ಕಾರಿ ಹುದ್ದೆ ಮತ್ತು ಒಂದು ನಿವೇಶನ ನೀಡುವಂತೆ ಆಡಳಿತ ಮಂಡಳಿಗೆ ಆದೇಶಿಸಿದರು.
