ಬೆಂಗಳೂರು : ಕಾಲು ಟಚ್ ಆದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಮತ್ತು ಭಾಗ್ಯರಾಜ್ ಬಂಧಿತ ಆರೋಪಿಗಳು. ಶಶಿಕುಮಾರ್ ಕೊ*ಯಾದ ದುರ್ದೈವಿ.
ಪ್ರಕರಣದ ಹಿನ್ನೆಲೆ |
ಕಳೆದ ಮಾರ್ಚ್ 2 ರಾತ್ರಿ ಶಿವನಹಳ್ಳಿ ಪ್ರದೇಶದ ಗುರುರಾಘವೇಂದ್ರ ಹೋಟೆಲ್ ಬಳಿ ಕಾಲು ಟಚ್ ಆದ ವಿಚಾರಕ್ಕೆ ಶಶಿಕುಮಾರ್ ಹಾಗೂ ಮಂಜುನಾಥ್ ನಡುವೆ ವಾಗ್ವಾದ ಶುರುವಾಗಿದೆ. ಮಾತು ಮಾತಿಗೆ ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ.
ಆಗ ಶಶಿಕುಮಾರ್ ಮೇಲೆ ಸೇಡು ತೀರಿಸಿಕೊಳ್ಳಲು ಮಂಜುನಾಥ್ ತನ್ನ ಸಹೋದರ ಭಾಗ್ಯರಾಜ್ಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಈ ವೇಳೆ ಮತ್ತೆ ಶಶಿಕುಮಾರ್ ಜೊತೆ ಇಬ್ಬರು ಕಿರಿಕ್ ಮಾಡಿದ್ದಾರೆ. ರೊಚ್ಚಿಗೆದ್ದ ಭಾಗ್ಯರಾಜ್ ಏಕಾಏಕಿ ಶಶಿಕುಮಾರ್ ಅವರ ಕತ್ತಿಗೆ ಚಾಕು ಇರಿದು ಹ*ತ್ಯೆ ಮಾಡಿದ್ದಾನೆ.
ಬರ್ಬರವಾಗಿ ಹ*ತ್ಯೆ ಮಾಡಿದ ಬಳಿಕ ಇಬ್ಬರು ಅಲ್ಲಿಂದ ಪರಾರಿಯಾಗಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಪೊಲೀಸ್ ಠಾಣಾ ಪೊಲೀಸರು, ಇದೀಗ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ : ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR!



















