ಬೆಂಗಳೂರು | ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಪ್ರಾಮಿಸ್ ಮಾಡ್ತೀವಿ ಎಂಬ ಹುರುಪಿನಲ್ಲೇ ‘ಸಿಂಹಪುರಿಯ ಸಿಂಹ’ ಟ್ರೈಲರ್ ಲಾಂಚ್ ನೆರವೇರಿದೆ.
ಡಾ. ರಾಜೇಂದ್ರ ಮಹಾಸ್ವಾಮಿಗಳು ಟ್ರೈಲರ್ ಬಿಡುಗಡೆಗೊಳಿಸಿ ಶುಭಹಾರೈಸಿದ್ರು. ಕೆ.ವೈ.ಮೂರ್ತಿ ನಿರ್ಮಾಣದ ಜೊತೆ ಆಕ್ಟ್ ಮಾಡಿರೋ ಸಿನಿಮಾದಲ್ಲಿ ಸೌಜನ್ಯ ನಾಯಕಿ. ಜೊತೆಗೆ ಸುಧೀನ್ ಕುಮಟಾ ಹಾಗೂ ನಿಲೇಶ್ ಗೌಡ ಮುಖ್ಯ ಪಾತ್ರಗಳಲ್ಲಿದ್ದಾರೆ.
ಚಿತ್ರದಲ್ಲಿ ಹಾಡುಗಳ ಗುನುಗು ಜೋರಾಗಿರುತ್ತಂತೆ. ಲವ್,ಆಕ್ಷನ್, ಫ್ಯಾಮಿಲಿ ಮನರಂಜನೆಯ ಜೊತೆ ಒಂದು ರಹಸ್ಯಕಥೆಯೂ ಅಡಗಿರುತ್ತೆ. ಕುತೂಹಲವನ್ನ ಕಾಪಾಡಿಕೊಂಡೇ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರೋ ಐಡಿಯಾ ‘ಸಿಂಹಪುರಿಯ ಸಿಂಹ’ನದ್ದು.
ಇದನ್ನೂ ಓದಿ : ‘ವೀರ ಕಂಬಳ’ಕ್ಕೆ ಸಿಎಂ ಶುಭಾಶಯ..!



















