ಬೆಂಗಳೂರು: ಪ್ರಣಂ ದೇವರಾಜ್ ಅಭಿನಯದ “S\O ಮುತ್ತಣ್ಣ” ಚಿತ್ರದ ಹಾಡು ಹಾಡುವುದರ ಮೂಲಕ ಗಾಯಕಿ ದೀಪ್ತಿ ಸುರೇಶ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ, ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S\O ಮುತ್ತಣ್ಣ” ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಹಾಡು ಬರೆದಿದ್ದಾರೆ.
ಅವರು ಬರೆದ “ಕರೆದರೆ ಹಾಗೆಲ್ಲಾ ಬರಲಾರೆ ನಾನು” ಎಂಬ ಹಾಡನ್ನು ತ ದೀಪ್ತಿ ಸುರೇಶ್ ಹಾಡಿದ್ದಾರೆ. ಈ ಹಾಡನ್ನು ಹಾಡುವ ಮೂಲಕ ದೀಪ್ತಿ ಸುರೇಶ್ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

“ಮಾಮನ್ನನ್”, “ಬೇಬಿ ಜಾನ್”, ” ಮಾರಾ”, “ಜವಾನ್”, “ವೆಟ್ಟೈಯನ್” ಮುಂತಾದ ಚಿತ್ರಗಳ ಹಾಡುಗಳನ್ನು ತಮ್ಮದೇ ಆದ ವಿಶಿಷ್ಟವಾದ ಧ್ವನಿಯ ಮೂಲಕ ಹಾಡುವುದರೊಂದಿಗೆ ದೀಪ್ತಿ ಸುರೇಶ್ ಕೇಳುಗರ ಮನ ಗೆದ್ದಿದ್ದಾರೆ. ಉದಯನಿಧಿ ಸ್ಟಾಲಿನ್ ಅಭಿನಯದ “ಮಾಮನ್ನನ್” ಚಿತ್ರದ “ಕೊಡಿ ಪರಕುರ ಕಾಲಂ” ಹಾಗೂ ರಜನಿಕಾಂತ್ ಅಭಿನಯದ “ವೆಟ್ಟೈಯನ್” ಚಿತ್ರದ “ಮನಸಿಲಾಯೊ” ಹಾಡುಗಳಂತೂ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ “S/O ಮುತ್ತಣ್ಣ” ಚಿತ್ರದ ಈ ಹಾಡು ಸಹ ದೀಪ್ತಿ ಸುರೇಶ್ ಅವರ ಗಾಯನದಲ್ಲಿ ಉತ್ತಮವಾಗಿ ಮೂಡಿಬಂದಿದೆ.
ತಂದೆ – ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಜಾಕ್ ಮಂಜು ಅವರ ನೇತೃತ್ವದ ಶಾಲಿನಿ ಆರ್ಟ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡಲಿದೆ.
ಣಂ ದೇವರಾಜ್ ಅವರಿಗೆ ನಾಯಕಿಯಾಗಿ “ದಿಯಾ” ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ.