ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ, ರಾಷ್ಟ್ರದ ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿ ಆಗಬಾರ್ದು ಎಂದ್ರು. ಆದ್ರೆ ಸಿಎಂ ಸುದ್ದಿಗೋಷ್ಠಿಯುದ್ದಕ್ಕೂ ಎಲ್ಲರ ಗಮನ ಸೆಳೆದಿದ್ದು ಮಾತ್ರ ಅವರ ಹಣೆ ಮೇಲಿದ್ದ ಸಿಂಧೂರ.
ಹೌದು, ಈ ಹಿಂದೆ ಹಣೆಗೆ ಕುಂಕುಮ ಇಡಲು ಮುಂದಾದ ವ್ಯಕ್ತಿಯನ್ನು ಗದರಿದ್ದ ಸಿದ್ದು ಇಂದು ತಿಲಕವಿಟ್ಟು ಪ್ರೆಸ್ ಮೀಟ್ ಗೆ ಬಂದದ್ದು ವಿಶೇಷವಾಗಿತ್ತು. ಆಪರೇಷನ್ ಸಿಂಧೂರಕ್ಕೂ ಹಣೆ ಮೇಲಿನ ಸಿಂಧೂರಕ್ಕೂ ಏನೋ ಅವಿನಾಭವ ಎನ್ನುವಂತಿತ್ತು ಇವತ್ತಿನ ಸಿಎಂ ನಡೆ.