ಶ್ರೀಲಂಕಾ : ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಏಷ್ಯನ್ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವು ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿದೆ.
ವಿಜೇತ ಭಾರತ ತಂಡದಲ್ಲಿ ಏಳು ಆಟಗಾರರ ಪೈಕಿ ಕರ್ನಾಟಕದ ಕಲ್ಪತರು ನಾಡು ತುಮಕೂರಿನ ಪ್ರಕಾಶ್ ಆರ್ ಅಮೃತ ಹಸ್ತರವರು ಉತ್ತಮ ಪ್ರದರ್ಶನ ನೀಡಿದ್ದಾರೆ.
ಈ ಮೂಲಕ ದೈಹಿಕ ನ್ಯೂನತೆ ಇದ್ದರೂ ಸಾಧಿಸಬೇಕೆಂಬ ಛಲವಿದ್ದರೆ ಸಾಧನೆಗೆ ಅಡ್ಡಿಯಾಗದು ಎಂಬುದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ತುಮಕೂರಿನ ಪ್ರಕಾಶ್ ಆರ್ ಅಮೃತ ಹಸ್ತರವರು ಸಾಕ್ಷಿಯಾಗಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಏಷ್ಯನ್ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್‌ನಲ್ಲಿ ರನ್ನರಪ್ ಆಗಿ ಇಡೀ ಏಷ್ಯಾ ಖಂಡವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸಾಮಾನ್ಯ ಆಟಗಾರರಂತೆ ವಿಕಲಚೇತನ ಆಟಗಾರರಿಗೂ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಿದರೆ, ಇಡೀ ವಿಶ್ವದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಇವರು ಹಾರಿಸುವುದರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ : ದಾವಣಗೆರೆ ‘ಧಣಿ’ ಇನ್ನು ನೆನಪು ಮಾತ್ರ.. ಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಜಾರಿದ ಶಾಮನೂರು ಶಿವಶಂಕರಪ್ಪ



















