ಬೆಂಗಳೂರು: ಮೈಸೂರಿನಲ್ಲಿ (Mysuru) ನಡೆಯುತ್ತಿದ್ದ ಸಾಧಾನಾ ಸಮಾವೇಶದಲ್ಲಿ ಮುಜುಗುರಕ್ಕೆ ಒಳಗಾಗಿದ್ದ ಡಿಕೆಶಿ ದಿಢೀರ್ ದೆಹಲಿಗೆ ಹಾರಿದ್ದಾರೆ.
ಸಮಾವೇಶದಿಂದ ದಿಢೀರ್ ನಿರ್ಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ (New Delhi) ಪ್ರಯಾಣ ಬೆಳೆಸಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮ ಅರ್ಧಕ್ಕೆ ಬಿಟ್ಟು ದೆಹಲಿಗೆ ಹೊರಟ ಡಿಕೆಶಿ ನಡೆ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇತ್ತೀಚಿಗಷ್ಟೇ ಡಿಕೆಶಿ ದೆಹಲಿಗೆ ಹೋಗಿದ್ದರು. ಸಾಧನಾ ಸಮಾವೇಶದಲ್ಲಿನ ಮುಜುಗರದ ಹೇಳಿಕೆಗೆ ಬೇಸತ್ತು ದೆಹಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಜುಲೈ 11 ಹಾಗೂ 12ರಂದು ಶಿರಡಿಗೆ ತೆರಳಿದ್ದ ಡಿಕೆಶಿ ದಿಢೀರ್ ದೆಹಲಿಗೆ ಭೇಟಿ ನೀಡಿದ್ದರು. ಈಗ ಮತ್ತೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.



















