ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿಧಾನಸೌಧ ಹಂಚಿಕೊಂಡಂತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಬ್ಬರು ಒಬ್ಬರ ಮೇಲೆ ಒಬ್ಬರು ಎತ್ತಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಸ್ಟೇಡಿಯಂ ಘಟನೆಯನ್ನು ಡಿ.ಕೆ. ಶಿವಕುಮಾರ್ ತಲೆಗೆ ಕಟ್ಟಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದರೆ, ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್ ಮಾಡುತ್ತಿದ್ದಾರೆ. ಇವರಿಬ್ಬರ ಕಿತ್ತಾಟಕ್ಕೆ ಅಮಾಯಕ ಕುಟುಂಬಗಳು ಗೋಳಾಡುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಸ್ಟೇಡಿಯಂ ಗಲಾಟೆಗೂ ನಮಗೂ ಸಂಬಂಧ ಇಲ್ಲ ಅಂತಾರೆ. ಹಾಗಾದರೆ, ಡಿಕೆ ಶಿವಕುಮಾರ್ ಸರ್ಕಾರದ ಭಾಗವಲ್ಲವೇ? ಇವರಿಬ್ಬರ ಅಧಿಕಾರದ ಕಿತ್ತಾಟ ಬೀದಿಗೆ ಬಂದಿದೆ. ನಿಮ್ಮ ತಪ್ಪು ಇಲ್ಲ ಅಂದರೆ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ಸವಾಲು ಹಾಕಿದ್ದಾರೆ.