ಬೈಂದೂರು : ಸಿದ್ದೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಜಡ್ಕಲ್ ಇದರ 2024-25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಕೊಲ್ಲೂರಿನ ಮೂಕಾಂಬಿಕಾ ಸಭಾಭವನ, ನಡೆಯಿತು.
ಸಂಘದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ್ ಜೋಗಿಜಡ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘ ಹುಟ್ಟು ಹಾಕುವುದರ ಮೂಲಕ ಸಮುದಾಯದವರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ಶಕ್ತಿ ತುಂಬುವ ಕೆಲಸ ಸಂಘದ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ. ಅನಾರೋಗ್ಯಕ್ಕೆ ಒಳಗಾದ ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು ಹಾಗೂ ಅಕಾಲಿಕವಾಗಿ ಮೃತಪಟ್ಟವರಿಗೆ ಸಹಾಯಧನ ನೀಡಲಾಗಿದ್ದು. ಪ್ರಸ್ತುತ ವರ್ಷದಲ್ಲಿ ಸಂಘದ ಸದಸ್ಯರಿಗೆ 7 ಕೋಟಿ ಸಾಲವನ್ನು ವಿತರಿಸಿ ಸಂಘವು 37 ಕೋಟಿಗೂ ಅಧಿಕ ವ್ಯವಹಾರವನ್ನ ಈ ವರದಿ ವರ್ಷದಲ್ಲಿ ನಡೆಸಿದೆ ಎಂದು ತಿಳಿಸಿದರು.
ಸಂಘದ ಸಿಇಒ ಉದಯ ನಾಯ್ಕ್ ಕನ್ಕಿಮಡಿ ವಾರ್ಷಿಕ ವರದಿ ಮಂಡಿಸಿ ಸದಸ್ಯರಿಂದ ಅನುಮೋದನೆಯನ್ನು ಪಡೆದು ಕೊಂಡು ಮಾತನಾಡಿ, 2021 ರಲ್ಲಿ ಆರಂಭಗೊಂಡಿರುವ ಸಂಸ್ಥೆಯು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿದ್ದು, ಕಳೆದ ವರ್ಷ 11 ಲಕ್ಷ.ರೂ ಲಾಭಗಳಿಸಿದ ನಮ್ಮ ಸಂಸ್ಥೆ ಈ ವರ್ಷ 14ಲಕ್ಷ ಲಾಭ ಗಳಿಸಿದೆ.ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ 8% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಪ್ಪ ನಾಯ್ಕ ಮುತ್ತಾಬೇರು, ಸುರೇಶ ನಾಯ್ಕ, ಬೆಳ್ಳಾಲ,ವನಿತಾ ವಿ.,ಗೋಳಿಹೊಳೆ, ಮಲ್ಲಿಕಾ, ಜೋಗಿಜಡ್ಡು, ಶಂಕರ ನಾಯ್ಕ ಕೊಡಿಯಾಳಕೇರಿ, ರಾಮ ನಾಯ್ಕ ಹಡ್ಗಿಕೇರಿ, ಮಂಜುನಾಥ ನಾಯ್ಕ, ಹಳ್ಳಿಹೊಳೆ, ಮಂಜುನಾಥ ನಾಯ್ಕ, ದಳಿ, ರವೀಂದ್ರ ನಾಯ್ಕ, ಮಾರಣಕಟ್ಟೆ, ಜಯಂತ ನಾಯ್ಕ, ಹೊಸೂರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ನಾಯ್ಕ ಹರ್ಕೂಡ ಸ್ವಾಗತಿಸಿದರು ಡಾ. ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ನಾಯ್ಕ್ ನಂದಿಗದ್ದೆ ವಂದಿಸಿದರು.



















