ಬಳ್ಳಾರಿ: ಮುಡಾ ಅಕ್ರಮದ ಪದೇ ಪದೇ ಮಾತನಾಡುವುದು ಬೇಡ. ಈಗಾಗಲೇ ತನಿಖೆ ಆರಂಭವಾಗಿದೆ. ಅದು ತನ್ನ ಕೆಲಸ ತಾನು ಮಾಡುತ್ತದೆ. ಆದರೆ, ಸಿಎಂ ರಾಜೀನಾಮೆ ಕೇಳುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಅನಾದಿಲಿಂಗೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಸದಸ್ಯತ್ವ ಅಭಿಯಾನ-2024 ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟ ವಿಚಾರ. ರೆಡ್ಡಿ ಸಹೋದರರು, ಮಾಜಿ ಸಚಿವ ಬಿ.ಶ್ರೀರಾಮುಲು ಬೇರೆ ಬೇರೆಯಾದಾಗ ಏನಾಯಿತು, ಎಲ್ಲರಿಗೂ ಈಗ ಗೊತ್ತಾಗಿದೆ. ಸದ್ಯ ಬಳ್ಳಾರಿ ಬಿಜೆಪಿ ಸ್ಥಿತಿ ಎಲ್ಲ ನಾಯಕರಿಗೆ ಗೊತ್ತಾಗಿದೆ. ಎಲ್ಲರೂ ಬೇರೆಯಾದಾಗ ಏನಾಗಿದೆ? ಈಗ ಎಲ್ಲಿದ್ದಾರೆ. ಈಗ ಒಂದಾಗೋ ಸಮಯ ಬಂದಿದೆ. ಕೆಲವೇ ದಿನಗಳಲ್ಲಿ ಅವರೆಲ್ಲ ಒಂದಾಗುತ್ತಾರೆ ಎಂದು ಹೇಳಿದ್ದಾರೆ.