ಸಿಎಂ ಸಿದ್ದರಾಮಯ್ಯನವರೇ ವ್ಯಕ್ತಪಡಿಸಿದಂತೆ ನಾನು ಅದೇ ಆಶಯವನ್ನು ಹೊಂದಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರೇ ಸಿಎಂ. ಸಿಎಂ ಬದಲಾವಣೆ ಮಾಡಬೇಕೆಂದರೇ ಹೈಕಮಾಂಡ್ ನಿರ್ಧರಿಸಬೇಕು. ಪಕ್ಷದ ಶಾಸಕರು ಮಾಡಬೇಕು. ಹೈಕಮಾಂಡ್ ಬದಲಾವಣೆ ಮಾಡುವುದಕ್ಕೆ ತಯಾರಿಲ್ಲವೆಂದು ಭಾವಿಸಿದ್ದೇನೆಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ವರದಿಗಾರರಿಗೆ ಸ್ಪಂದಿಸಿದ ರಾಜಣ್ಣ, ಹೈಕಮಾಂಡ್ ಆಗಾಗ ಮಂತ್ರಿಗಳನ್ನು ಭೇಟಿಗೆ ಅವಕಾಶ ಮಾಡಿಕೊಡುವುದು ಸಹಜ. ಸಿಎಂ, ಡಿಸಿಎಂ ಹೈಕಮಾಂಡ್ ಅವರನ್ನು ಭೇಟಿ ಮಾಡುವುದಕ್ಕೆ ಹೋಗಿದ್ದಾರೆ. ಅದಕ್ಕೆ ಗೊಂದಲ ಸೃಷ್ಟಿಸುವುದು ಅಗತ್ಯವಿಲ್ಲ ಎಂದವರು ಹೇಳಿದ್ದಾರೆ.
ಒಂದು ಸಲ ಎಐಸಿಸಿ ಅಧ್ಯಕ್ಷರು ಋಜು ಹಾಕಿದ ಪಟ್ಟಿ ಹೊರಗೆ ಬಂದಮೇಲೆ ಅದು ಅಂತಿಮ. ಅದರ ಬಗ್ಗೆ ಯಾರೋ ಏನೋ ಹೇಳಬಹುದು. ಸಾಕಷ್ಟು ಪಟ್ಟಿ ಬರಬಹುದು. ಎಐಸಿಸಿ ಅಧ್ಯಕ್ಷರ ಸಹಿ ಇದ್ದ ಪ್ರತಿ ಹೊರಬಂದ ಮೇಲೆ ಪಕ್ಷದವರು ಅದನ್ನು ಒಪ್ಪಬೇಕು. ಅದನ್ನು ಬದಲಾವಣೆ ಮಾಡುತ್ತೇನೆ ಎನ್ನುವುದು ಅಶಿಸ್ತು ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿಯರನ್ನ ಎಲ್ಲರನ್ನೂ ಭೇಟಿ ಮಾಡುತ್ತಾರೆ. ಡಿಕೆಶಿ ಪಕ್ಷದ ಅಧ್ಯಕ್ಷರು. ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ.
ಸುರ್ಜೆವಾಲ ರಾಜ್ಯ ಭೇಟಿಯಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇಲ್ಲಿ ಅವರು ಬಂದು ನಡೆಸಿದ ಪ್ರಕ್ರಿಯೆ ಬಗ್ಗೆ ನನಗೆ ಸಮಾಧಾನ ಇಲ್ಲಾ ಎಂದು ಅವರು ಹೇಳಿದ್ದಾರೆ.