ಬೆಂಗಳೂರು : ಸಿದ್ದರಾಮಯ್ಯ ಅವರದ್ದು ಉಪ್ಪು, ಹುಳಿ, ಖಾರ ಇಲ್ಲದ ಬರೀ ಸಾಲದ ಬಜೆಟ್ ಆಗಿದ್ದು, ಕಳೆದ ಮೂರು ವರ್ಷಗಳಲ್ಲಿ ಇವರೊಬ್ಬರೇ 4ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು,ಈ ಬಗ್ಗೆ ಮಾತನಾಡಿದ ಆರ್ ಅಶೋಕ್, ಇದೇ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆದ್ರೆ ಸಾಲದ ಹೊರೆ ಹತ್ತು ಲಕ್ಷ ಕೋಟಿ ಆಗಲಿದೆ. ಬೇರೆಲ್ಲಾ ಸಿಎಂ ಮಾಡಿರೋ ಸಾಲಕ್ಕಿಂತ, ಸಿದ್ದರಾಮಯ್ಯ ಅವರು ಒಬ್ಬರೇ ಹತ್ತು ಪಟ್ಟು ಸಾಲ ಮಾಡಿ ರೆಕಾರ್ಡ್ ಆಗಲಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಸರ್ವರಿಗೂ ತೆರಿಗೆ ಸರ್ವರಿಗೂ ಸಾಲ ಇದು ಸಿದ್ದರಾಮಯ್ಯ ಅವರ ಬಜೆಟ್ ಆಗಿದೆ. ನಾಲ್ಕುವರೆ ಲಕ್ಷ ಕೋಟಿ ಸಿದ್ದರಾಮಯ್ಯ ಸಾಲ ಮಾಡಿದ್ದಾರೆಈಗ ಎಂಟುವರೆ ಲಕ್ಷ ಕೋಟಿ ಸಾಲ ನಮ್ಮ ತಲೆ ಮೇಲೆ ಬಿದ್ದಿದೆ. ಸಾಲ ಮಾಡಿ ಸರ್ಕಾರ ನಡೆಸುವುದಕ್ಕೆ ನೀ ಯಾಕೆ ಬೇಕಾಪ್ಪ ಸಿದ್ದರಾಮಯ್ಯ? ಹಾಗಿದ್ರೆ ರೋಡಿನಲ್ಲಿ ತರಕಾರಿ ಮಾರೋರು ಕೂಡ ಸರ್ಕಾರ ನಡೆಸುತ್ತಾರೆ ಎಂದು ಕಿಡಿಕಾರಿದ್ದಾರೆ
ಸಿದ್ದರಾಮಯ್ಯ ಕರ್ನಾಟಕ ಆರ್ಥಿಕ ಪರಿಸ್ಥಿತಿಯನ್ನ ಹಾಳು ಮಾಡಿದ್ದಾರೆ. ಚೊಂಬುನಲ್ಲಿ ರಾಜ್ಯದ ಜನತೆಗೆ ದೊಡ್ಡ ಚೊಂಬು ನೀಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ವೋಟ್ ಗೋಸ್ಕರ್ ಮಾಡಿರೋ ಬಜೆಟ್ ಇದಾಗಿದೆ. ಈ ಸರ್ಕಾರವನ್ನ ಕಿತ್ತೊಗೆಯುವರೆಗೂ ನಾವು ಹೋರಾಟ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಾಲಗಾರ ಸಿದ್ದರಾಮಯ್ಯ – ಬಿಜೆಪಿ ಟೀಕೆ



















